ಮಂಗಳೂರು: ನಗರದ ಕಾವೂರು ದೇವಳದ ಬಳಿ ಶುಕ್ರವಾರ ರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡು ಬಳಿಕ ಬೆಂಕಿ ಆವರಿಸಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕಾವೂರು ಮಹಾಲಿಂಗೇಶ್ವರ ದೇವಸ್ಥನದ ಬಳಿ ರಾತ್ರಿ ಸುಮಾರು 1 ಗಂಟೆಗೆ ಘಟನೆ ನಡೆದಿದೆ. ಕಾವೂರು ಕಡೆಯಿಂದ ಕೊಂಚಾಡಿ ಕಡೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಬಾನೆಟ್ ನಲ್ಲಿ ಹೊಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಚಾಲಕ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು, ಈ ವೇಳೆ ಏಕಾ ಏಕಿ ಬೆಂಕಿ ಹತ್ತಿ ಕೊಂಡಿದೆ. ತತ್ ಕ್ಷಣ ಕದ್ರಿ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ್ದು, ಅಗ್ನಿ ಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿದರಾದರೂ, ಆ ವೇಳೆಗಾಗಲೇ ಕಾರು ಬಹುತೇಕ ಬೆಂಕಿಗೆ ಆಹುತಿಯಾಗಿತ್ತು.
2008 ಮಾದರಿಯ ವೂಕ್ಸ್ ವ್ಯಾಗನ್ ಕಂಪೆನಿಗೆ ಸೇರಿದ ಕಾರಾಗಿದ್ದು, ಸೂಜಿಗುಡ್ಡೆ ನಿವಾಸಿ ಶಿವಾನಂದ ಎಂಬವರು ಚಲಾಯಿಸುತ್ತಿದ್ದರು. ಕಾರಿನಲ್ಲಿ ಚಾಲಕ ಮಾತ್ರ ಇದ್ದರು ಎಂದು ತಿಳಿದು ಬಂದಿದೆ.