ಅಪಘಾತಕ್ಕೀಡಾದ ಕಾರು 
ಜಿಲ್ಲೆ

ಕೆಎಸ್​ಆರ್​ಟಿಸಿ ಬಸ್-ಕಾರು ಡಿಕ್ಕಿ; ಮನ್​ಮುಲ್ ನಿರ್ದೇಶಕ ಸೇರಿ ಇಬ್ಬರ ಪರಿಸ್ಥಿತಿ ಗಂಭೀರ

Webdesk - Ravikanth

ಮಂಡ್ಯ: ಕೆಎಸ್​ಆರ್​​ಟಿಸಿ ಬಸ್​ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮನ್​ಮುಲ್ ನಿರ್ದೇಶಕ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆ ಕಣಿವೆ ಬಳಿ ಈ ಅಪಘಾತ ಸಂಭವಿಸಿದೆ.

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಮನ್​ಮುಲ್​) ನಿರ್ದೇಶಕ ಕಾಡೇನಹಳ್ಳಿ ಚಂದ್ರ ಅವರ ಕಾರು ಮತ್ತು ಕೆಎಸ್​ಆರ್​ಟಿಸಿ ಬಸ್ ಮೇಲುಕೋಟೆ ಕಣಿವೆ ಬಳಿ ಡಿಕ್ಕಿ ಹೊಡೆದುಕೊಂಡಿವೆ.

ಈ ಅಪಘಾತದಲ್ಲಿ ರಾಮಚಂದ್ರ ಮತ್ತು ಅವರ ಕಾರಿನ ಚಾಲಕ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಅಪಘಾತದಿಂದಾಗಿ ಕಾರು ನಜ್ಜುಗುಜ್ಜಾಗಿದ್ದು, ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.