ಜಿಲ್ಲೆ

ಹೆದ್ದಾರಿ ಅಪಘಾತಕ್ಕೆ ಮತ್ತೊಂದು ಬಲಿ

ಕಾರವಾರ:ಕಾರು ಹಾಗೂ ಬೈಕ್ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಿಣಗಾ ಕರಿದೇವ ದೇವಸ್ಥಾನದ ಸಮೀಪ ಶುಕ್ರವಾರ ತಡ ರಾತ್ರಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಅಂಕೋಲಾ ಅಗಸೂರಿನ ಹೊನ್ನಳ್ಳಿಯ ಪ್ರವೀಣ ಕೇಶವ ಗೌಡ(25) ಮೃತರು. ಕಾರವಾರ ಕ್ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ಸಂಬಂಧಿಕರ ಆರೋಗ್ಯ ವಿಚಾರಿಸಿ ವಾಪಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ಕಾರು ಚಾಲಕ ಗೋವಾ ಮೂಲದ ಶೇಖ್ ಮೌಲಾ ಅಲಿ ವಿರುದ್ಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥಿತ ತಿರುವಿನ ಪರಿಣಾಮ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ವಾರದ ಹಿಂದೆ ಬೈತಖೋಲ್‌ ಘಟ್ಟದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದ. ರಾಷ್ಟ್ರೀಯ ಹೆದ್ದಾರಿ 66 ರ ಅವ್ಯವಸ್ಥಿತ ಕಾಮಗಾರಿಯಿಂದ ಕಳೆದ ಎರಡುವರೆಗೆ ವರ್ಷದಲ್ಲಿ 263 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ವರದಿ ಸಲ್ಲಿಸಿದೆ.