ಜಿಲ್ಲೆ

ಸೇತುವೆ ಮೇಲಿಂದ ನಾಲೆಗೆ ಹಾರಿದ ಕಾರು, ಮುಂದೇನಾಯ್ತು ನೀವೆ ನೋಡಿ..?

ಮಂಡ್ಯ: ಪಾಂಡವಪುರ ತಾಲೂಕಿನ ಬನಘಟ್ಟ ಗ್ರಾಮದ ಬಳಿ ಭಾನುವಾರ ರಾತ್ರಿ ಕಾರೊಂದು ಸೇತುವೆ ಮೇಲಿಂದ ವಿಶ್ವೇಶ್ವರಯ್ಯ ನಾಲೆಗೆ ಹಾರಿ ನೀರೊಳಗೆ ಬಿದ್ದ ಪರಿಣಾಮ ಒರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ನಾಗಮಂಗಲ ತಾಲೂಕು ಅರೆಅಲ್ಪಹಳ್ಳಿ ಗ್ರಾಮದ ಧರಣೇಂದ್ರ(35) ಮೃತ. ಗ್ರಾಮದ ಐವರು ಆಯುಧಪೂಜೆಗೆಂದು ಮೈಸೂರಿನಿಂದ ಸಂಬಂಧಿಕರ ತೆರೆಳಿದ್ದರು. ಹಬ್ಬ ಮುಗಿಸಿ ವಾಪಾಸ್ ಬರುವಾಗ ಅವಘಡ ಸಂಭವಿಸಿದೆ. ನಾಲ್ವರು ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಾಂಡವಪುರ ಪೊಲೀಸರು, ಸೋಮವಾರ ಕಾರನ್ನು ನೀರಿನಿಂದ ಮೇಲೆತ್ತಿದರು.