ಜಿಲ್ಲೆ

ಕಾರುಗಳ ಮುಖಾಮುಖಿ ಡಿಕ್ಕಿ ಐವರ ದುರ್ಮರಣ

ಜಗನ್ನಾಥ್ ಕಾಳೇನಹಳ್ಳಿ

ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಮಧುಗಿರಿ: ಕಾರುಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ದಾರುಣ ಸಾವನ್ನಪ್ಪಿರುವ ಟನೆ ಭಾನುವಾರ ಸಂಜೆ ನಡೆದಿದೆ.

ತಾಲೂಕಿನ ಕಾಟಗಾನಹಟ್ಟಿ ಹಾಗೂ ಕೆರೆಗಳಪಾಳ್ಯ ಬಳಿ ಸಂಜೆ 7.30 ರಲ್ಲಿ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಜನಾರ್ದನ ರೆಡ್ಡಿ ಕುಟುಂಬದ ಮೂವರು ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಜನಾರ್ದನ ರೆಡ್ಡಿ (50), ಇವರ ಪುತ್ರಿ ಸಿಂಧು (50), ಮೊಮ್ಮಗ ಟ್ರಯಾಕ್​ ದೇವಾ (8), ಹಾಗೂ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿಯ ಸಿದ್ದಗಂಗಪ್ಪ (34), ನಾಗರಾಜು (30) ಮೃತ ದುರ್ದೈವಿಗಳು.

ಸಿಯಾಜ್​ ಕಾರಿನಲ್ಲಿದ್ದ ಎತ್ತಿನಹಳ್ಳಿಯ ಗೀತಾ (38) ಹಾಗೂ ಯೋಧ, ಒಂದು ವರ್ಷದ ಗಂಡು ಮಗು, ಚಾಲಕ ಆನಂದ್​ಗೆ ಗಂಭೀರಗಾಯಗಳಾಗಿದ್ದು ನಾಲ್ವರು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ವೈ.ಎಸ್​.ಹೊಸಕೋಟೆ ಕಡೆಯಿಂದ ಬೆಂಗಳೂರಿಗೆ ಸಿಯಾಜ್​ ಕಾರಿನಲ್ಲಿ ಜನಾರ್ದನ ರೆಡ್ಡಿ ಕುಟುಂಬ ತೆರಳುತ್ತಿದ್ದಾಗ ಈ ಅವಡ ಸಂಭವಿಸಿದೆ. ಟಿಯಾಗೊ ಕಾರಿನಲ್ಲಿದ್ದ ನಾಗರಾಜ್​ ಸಾವನ್ನಪ್ಪಿದ್ದು ಕೊರಟಗೆರೆಯಿಂದ ಮಧುಗಿರಿಗೆ ಹೊರಟಿದ್ದರು. ಸ್ಥಳಕ್ಕೆ

ಎಸ್ಪಿ ದೌಡು: ಕಾರುಗಳ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ದೌಡಾಯಿಸಿದ್ದು ಟನೆ ಕುರಿತು ಮಾಹಿತಿ ಪಡೆದುಕೊಂಡರು.