ಜಿಲ್ಲೆ

ಪುತ್ತೂರು ಪೇಟೆಯಲ್ಲಿ ಕಾರು ಪಲ್ಟಿ

Mangaluru - Nishantha Narayana

ಪುತ್ತೂರು: ಧನ್ವನಂತರಿ ಆಸ್ಪತ್ರೆಯ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಅಟೊಮೆಟಿಕ್ ಕಾರು ರಸ್ತೆಯಿಂದ ಬದಿಗೆ ಸರಿದು ಪಲ್ಟಿಯಾಗಿದೆ.

ಟಯರ್ ಅಂಗಡಿಯ ಮಾಲಕ ಸುರೇಶ್ ಚಂದ್ರ ರೈ ಅವರಿಗೆ ಸೇರಿದ KA21 Z8814 ನೋಂದಣಿಯ ಟೊಯೋಟಾ ಹೈರೈಡೆರ್ ಕಾರು ಮಗುಚಿಬಿದ್ದಿದೆ. ಬ್ರೇಕ್ ಜತೆಗೆ ಎಕ್ಸಲೇಟರ್ ತುಳಿದ ಕಾರಣ ನಿಯಂತ್ರಣ ಕಳೆದುಕೊಂಡಿದೆ ಎನ್ನಲಾಗಿದೆ.

ನಿದ್ದೆ ಮತ್ತಿನಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು, ಕಾರಿನಲ್ಲಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸ್ಥಳದಿಂದ ದಂಪತಿಗಳನ್ನು ಅವರ ಮನೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ತಮ್ಮ ಕಾರಿನಲ್ಲಿ ಕಳೆದುಕೊಂಡು ಹೋಗಿದ್ದಾರೆ.