ಕಾರವಾರ: ಕಾರು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಚಿತ್ತಾಕುಲಾ ಹೊಸಾಳಿ ಕ್ರಾಸ್‌ನ ಪೆಟ್ರೋಲ್ ಬಂಕ್ ಸಮೀಪ ಸೋಮವಾರ ರಾತ್ರಿ ನಡೆದಿದೆ.
ಕಾರವಾರ ಸಂಕ್ರಿವಾಡ ಪೋರ್ಟ್ ಕಾಲನಿ ನಿವಾಸಿ ರಾಹುಲ್ ಸುಹಾಸ್ ಕಿಂದಳಕರ್ (31) ಮೃತ. ಗೋವಾದಲ್ಲಿ ಉದ್ಯೋಗದಲ್ಲಿದ್ದ ರಾಹುಲ್ ಸ್ನೇಹಿತನ ಕಾರ್ ಪಡೆದು, ಹಳಿಯಾಳಕ್ಕೆ ತೆರಳಿದ್ದರು ಎನ್ನಲಾಗಿದೆ. ವಾಪಸ್ ಕಾರವಾರಕ್ಕೆ ರುವಾಗ ಸೋಮವಾರ ರಾತ್ರಿ 2 ಗಂಟೆಯ ಸುಮಾರಿಗೆ ಕಾರು ಪಲ್ಟಿಯಾಗಿದೆ. ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.