ಶೇಖಮಲೆ ಸೇತುವೆಯ ಬಳಿ ಕಾರುಗಳೆರಡರ ನಡುವೆ ಡಿಕ್ಕಿ ಸಂಭವಿಸಿರುವುದು. 
ಜಿಲ್ಲೆ

ಕಾರು ಅಪಘಾತ, ಚಾಲಕನಿಗೆ ಗಾಯ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ : ಕಾರುಗಳೆರಡರ ನಡುವೆ ಡಿಕ್ಕಿ ಸಂಭವಿಸಿ ಕಾರು ಚಾಲಕರೊಬ್ಬರು ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಮತ್ತು ಶೇಖಮಲೆ ಸೇತುವೆ ನಡುವಣ ಭಾಗದಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಭವಿಸಿದೆ. ಪುತ್ತೂರಿನಿಂದ ಕೌಡಿಚ್ಚಾರು ಕಡೆಗೆ ಅರಿಯಡ್ಕ ಗ್ರಾಮದ ಕುತ್ಯಾಡಿ ನಿವಾಸಿ ದಶರಥ್ ರೈ ಚಲಾಯಿಸಿಕೊಂಡು ಬರುತ್ತಿದ್ದ ಕಾರು ಮತ್ತು ಮಡಿಕೇರಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡೂ ಕಾರುಗಳು ಜಖಂಗೊಂಡಿದ್ದು, ಕಾರು ಚಾಲಕ ದಶರಥ್ ರೈ ಗಾಯಗೊಂಡಿದ್ದಾರೆ. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.