ಜಿಲ್ಲೆ

ಕಾರು ಡಿಕ್ಕಿ, ಮಹಿಳೆಗೆ ಗಾಯ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ : ಕಾರು ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿ ನಿಂತಿದ್ದ ವೃದ್ಧ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಕುಂಬ್ರ ಸಮೀಪದ ನಿವಾಸಿ ಖತೀಜಮ್ಮ (69) ಗಾಯಗೊಂಡವರು. ಕುಂಬ್ರದಲ್ಲಿರುವ ಸಹೋದರನ ಮನೆಗೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಕುಂಬ್ರದ ಸರ್ವಿಸ್ ಸ್ಟೇಷನ್ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಖತೀಜಮ್ಮ ಅವರಿಗೆ ಸುಳ್ಯ ಕಡೆಯಿಂದ ವಿಶಾಖ್ ಎಂಬುವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದಿದ್ದು, ಖತೀಜಮ್ಮ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾರೆ.