ಜಿಲ್ಲೆ

ಕಾಡು ಕುರಿ ಬೇಟೆಯಾಡಿದ್ದ ಆರೋಪಿ ಸೆರೆ

ವಿರಾಜಪೇಟೆ: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆದಮುಳ್ಳೂರು ಅರಣ್ಯದಲ್ಲಿ ಕಾಡು ಕುರಿಯನ್ನು ಬೇಟೆಯಾಡಿದ ಆರೋಪದ ಮೇರೆಗೆ 3ಕೆ.ಜಿ.ಮಾಂಸ ಸಮೇತ ವಿಶ್ವನಾಥ್ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಕೆದಮುಳ್ಳೂರು ಗ್ರಾಮದ ಮಹೇಶ್ ಎಂಬುವರ ಲೈನ್ ಮನೆಯಲ್ಲಿ ವಾಸವಿದ್ದ ವಿಶ್ವನಾಥ್ ಮಂಗಳವಾರ ಅರಣ್ಯದಲ್ಲಿ ಕಾಡು ಕುರಿಯನ್ನು ಬೇಟೆಯಾಡಿ ಅದನ್ನು ಮಾಂಸ ಮಾಡಿರುವ ಸುಳಿವು ದೊರೆತ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಬೆಳಗ್ಗೆ ವಿಶ್ವನಾಥ್ ಮನೆ ಮೇಲೆ ದಾಳಿ ನಡೆಸಿ ಮಾಂಸ, ಹತ್ಯೆಗೆ ಬಳಸಿದ್ದ ಕತ್ತಿಯನ್ನು ವಶ ಪಡಿಸಿಕೊಂಡಿದ್ದಾರೆ.

ಅರಣ್ಯಾಧಿಕಾರಿ ಕೊಣೇರಿರ ರೋಹಿಣಿ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ದಿಲೀಪ್, ಡೆಪ್ಯುಟಿ ರೇಂಜರ್ ದೇಯಂಡ ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕರಾದ ನಾಗರಾಜ್, ವಿಕಾಶ್, ಜೀತೇಶ್, ಮೊಣ್ಣಪ್ಪ, ಪ್ರಕಾಶ್, ಸಚಿನ್, ಪೊನ್ನಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.