ಜಿಲ್ಲೆ

ಕಾಡುಕೋಣ ಬೇಟೆಯಾಡಿದ್ದವನ ಸೆರೆ

ಮಡಿಕೇರಿ:

ಸೋಮವಾರಪೇಟೆ ತಾಲೂಕು ಮಾದಪುರ ಸಮೀಪದ ನಂದಿಮೊಟ್ಟೆಯಲ್ಲಿ ಬೃಹತ್ ಗಾತ್ರದ ಕಾಡುಕೋಣ(ಕಾಟಿ) ಬೇಟೆ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೇಧಿಸಿದ್ದಾರೆ. ಮಡಿಕೇರಿ ವಲಯ  ಅರಣ್ಯ ಅಧಿಕಾರಿಗಳಿಂದ ನಡೆದ ಕಾರ್ಯಚರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ 539 ಕೆ.ಜಿ ಕಾಡುಕೋಣ ಮಾಂಸ ವಶ ಪಡಿಸಿಕೊಳ್ಳಲಾಗಿದ್ದು,  ಎಮ್ಮೆಮಾಡು ನಿವಾಸಿ ಹ್ಯಾರಿಸ್(42) ಎಂಬಾತನನ್ನು ಬಂಧಿಸಲಾಗಿದೆ. ಭಾನುವಾರ ತಡರಾತ್ರಿ ಅಪ್ಪಂಗಳದಲ್ಲಿ ವಾಹನವನ್ನ ಬೆನ್ನಟ್ಟಿ  ಅರಣ್ಯ ಅಧಿಕಾರಿಗಳು ಪ್ರಕರಣ ಬೇಧಿಸಲಾಗಿದೆ. ಬೆನ್ನಟ್ಟುವ ಸಂದರ್ಭ ಜೊತೆಗಿದ್ದ ಮತ್ತೊಬ್ಬ ಆರೋಪಿ ಮೂಸ ಎಂಬಾತ ಪರಾರಿ ಆಗಿದ್ದಾನೆ. ಬಂಧಿತರಿಂದ ಎರಡು ಕತ್ತಿ ಹಾಗೂ ಪಿಕಪ್ ವಾಹನ ವಶಪಡಿಸಿಕೊಳ್ಳಲಾಗಿದೆ.