ಅಂತರ ರಾಜ್ಯ ಕಳ್ಳನಿಂದ ವಶಪಡಿಸಿಕೊಂಡ ಬಂಗಾರದ ಆಭರಣ ಹಾಗೂ ದ್ವಿಚಕ್ರ ವಾಹನದೊಂದಿಗೆ ಪೊಲೀಸರು. ಬನಹಟ್ಟಿ ಸಿಪಿಐ ಸಂಜು ಬಳಗಾರ, ಮಹಾಲಿಂಗಪುರ ಪೊಲೀಸ್ ಠಾಣೆ ಪಿಎಸ್‌ಐ ಪ್ರವೀಣ ಬೀಳಗಿ, ಎಲ್.ಬಿ. ದುದ್ದಣಗಿ ಇದ್ದಾರೆ.  
ಜಿಲ್ಲೆ

ಕುಖ್ಯಾತ ಅಂತರ ರಾಜ್ಯ ಕಳ್ಳನ ಸೆರೆ

Vijayapura - Desk - Gurappa Lokuri

ಮಹಾಲಿಂಗಪುರ: ಪಟ್ಟಣದ ಅಂಗಡಿಯೊಂದರ ಮಾಲೀಕನನ್ನು ಯಾಮಾರಿಸಿ ಬಂಗಾರದ ಆಭರಣ ದೋಚಿ ಪರಾರಿಯಾಗಿದ್ದ ಅಂತರ ರಾಜ್ಯ ಕಳ್ಳನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಕಲ್ಯಾಗೋಳ ಬಟ್ಟೆ ಅಂಗಡಿ ಎದುರಿನ ಬೆಳಗಲಿಯ ಮಹಾಲಿಂಗಪ್ಪ ಲೋಹಾರ ಅವರ ಬಂಗಾರದ ಅಂಗಡಿಯಲ್ಲಿ ಆ. 4 ರಂದು ಕಳ್ಳತನ ಘಟನೆ ನಡೆದಿತ್ತು.

ಗ್ರಾಹಕನ ಸೋಗಿನಲ್ಲಿ ಆಗಮಿಸಿ ಮಾಲೀಕನ ಲಕ್ಷೃ ಬೇರೆಡೆ ಸೆಳೆದು 84 ಸಾವಿರ ರೂ. ಮೌಲ್ಯದ ಬಂಗಾರದ ಆಭರಣ ದೋಚಿ ಪರಾರಿಯಾಗಿದ್ದ ಮಹಾರಾಷ್ಟ್ರದ ಸಾಂಗಲಿಯ ಕೋಜಾ ಕಾಲನಿಯ ನಿವಾಸಿ ಮೂಲತಃ ಧಾರವಾಡ ಜನ್ನತ್ ನಗರದ ಸಿಕಂದರ್ ಇರಾನಿ (37)ಯನ್ನು ಬಂಧಿಸಿ 84 ಸಾವಿರ ಮೌಲ್ಯದ ಆಭರಣ ಹಾಗೂ 60 ಸಾವಿರ ರೂ. ಕಿಮ್ಮತ್ತಿನ (ಟಿವಿಎಸ್ ಅಪಾಚಿ) ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ.

ಜಮಖಂಡಿ ಡಿವೈಎಸ್‌ಪಿ ಶಾಂತವೀರ, ಬನಹಟ್ಟಿ ಸಿಪಿಐ ಸಂಜು ಬಳಗಾರ ಮಾರ್ಗದರ್ಶನದಲ್ಲಿ ಮಹಾಲಿಂಗಪುರ ಪೊಲೀಸ್ ಠಾಣೆ ಪಿಎಸ್‌ಐ ಪ್ರವೀಣ ಬೀಳಗಿ, ಎಎಸ್‌ಐ ಎಸ್.ಡಿ. ಬಾರಿಗಿಡದ, ಪೊಲೀಸ್ ಸಿಬ್ಬಂದಿ ಎಲ್.ಬಿ. ದುದ್ದಣಗಿ, ಬಿ.ಪಿ. ಹಡಪದ, ಐ.ಎಂ. ಫಣಿಬಂದ, ಬಿ.ಜಿ. ದೇಸಾಯಿ, ಎಂ.ಎಸ್. ಕಣಶೆಟ್ಟಿ ತಂಡ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿದ್ದಾರೆ. ಮಹಾಲಿಂಗಪುರ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಬಹುಮಾನ ಘೋಷಿಸಿದೆ.