ಜಿಲ್ಲೆ

12 ಅಡಿ ಉದ್ದದ ಹೆಬ್ಬಾವು ಸೆರೆ

Kodagu

ಮಡಿಕೇರಿ: ತಾಲೂಕಿನ ಮರಗೋಡು ಗ್ರಾಮದಲ್ಲಿ 12 ಅಡಿ ಉದ್ದದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ.

ಗ್ರಾಮದ ಹೆಗ್ಗೇರಿ ಎಸ್ಟೇಟ್‌ನಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಮಾಲೀಕರು ತಕ್ಷಣ ಉರಗ ತಜ್ಞ ಮೂರ್ನಾಡುವಿನ ಪ್ರಜ್ವಲ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪ್ರಜ್ವಲ್ ಹಾವನ್ನು ಸೆರೆ ಹಿಡಿದು ಅರಣ್ಯಾಧಿಕಾರಿ ದೇವಯ್ಯ ಮತ್ತು ತಂಡಕ್ಕೆ ಹಸ್ತಾಂತರಿಸಿದರು.

ಹೆಬ್ಬಾವು ಸುಮಾರು 20 ಕೆಜಿ ತೂಗುತ್ತಿತ್ತು. ಹಾವು ಕಾಡುಕುರಿಯ ಮರಿಯನ್ನು ಭಕ್ಷಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.