ಜಿಲ್ಲೆ

ಕ್ಯಾಪ್ಟನ್ ಬಿ.ಸಿ. ಕಲ್ಮಠ ಸ್ಮಾರಕ ದತ್ತಿ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕ್ಯಾಪ್ಟನ್ ಬಿ.ಸಿ. ಕಲ್ಮಠ ಸ್ಮಾರಕ ದತ್ತಿ ಅಂಗವಾಗಿ ಆ. 9ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ `ಕಾಕೋರಿ ಚಳವಳಿಯ ಶತಮಾನದ ಸ್ಮರಣೆ' ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದ ಉಪನ್ಯಾಸಕ ನೀಡುವರು. ದತ್ತಿ ದಾನಿ ಶಾರದಾ ಬಿ. ಕಲ್ಮಠ ಉಪಸ್ಥಿತರಿರುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.