ಸುರತ್ಕಲ್ ಜಂಕ್ಷನ್‌ನಿಂದ ಎಂಆರ್‌ಪಿಎಲ್ ತನಕದ ರಸ್ತೆಗೆ ಹುತಾತ್ಮ ಯೋಧ ‘ಕ್ಯಾ.ಎಂ.ವಿ.ಪ್ರಾಂಜಲ್ ರಸ್ತೆ’ ಎಂದು ನಾಮಕರಣ ಮಾಡಬೇಕು ಮತ್ತು ಇಲ್ಲಿನ ವೃತ್ತದಲ್ಲಿ ಪ್ರಾಂಜಲ್ ಅವರ ಪ್ರತಿಮೆ ಪ್ರತಿಷ್ಠಾಪನೆಗೊಳಿಸಬೇಕು ಎಂದು ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಸಂಘಟನೆ ನಿಯೋಗ ಮಂಗಳವಾರ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದೆ. ವೇದಿಕೆ ಸುರತ್ಕಲ್ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಗೌರವ ಅಧ್ಯಕ್ಷ ಹುಂಡಿ ಪ್ರಭಾ ಕಾಮತ್, ಪ್ರಧಾನ ಕಾರ್ಯದರ್ಶಿ ಸಂದೀಪ್ ಅಂಬ್ಲಮೊಗರು, ಮುಖಂಡರಾದ ಸಂದೀಪ್, ಅಣ್ಣಪ್ಪ ದೇವಾಡಿಗ, ಹರೀಶ್ ಕಡಂಬೋಡಿ ಉಪಸ್ಥಿತರಿದ್ದರು. 
ಜಿಲ್ಲೆ

ಹುತಾತ್ಮ ಕಾ.ಪ್ರಾಂಜಲ್ ರಸ್ತೆನಾಮಕರಣ, ಪ್ರತಿಮೆ ಪ್ರತಿಷ್ಠಾಪನೆಗೆ ಮನವಿ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸುರತ್ಕಲ್ ಜಂಕ್ಷನ್‌ನಿಂದ ಎಂಆರ್‌ಪಿಎಲ್ ತನಕದ ರಸ್ತೆಗೆ ಹುತಾತ್ಮ ಯೋಧ ‘ಕ್ಯಾ.ಎಂ.ವಿ.ಪ್ರಾಂಜಲ್ ರಸ್ತೆ’ ಎಂದು ನಾಮಕರಣ ಮಾಡಬೇಕು ಮತ್ತು ಇಲ್ಲಿನ ವೃತ್ತದಲ್ಲಿ ಪ್ರಾಂಜಲ್ ಅವರ ಪ್ರತಿಮೆ ಪ್ರತಿಷ್ಠಾಪನೆಗೊಳಿಸಬೇಕು ಎಂದು ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಸಂಘಟನೆ ನಿಯೋಗ ಮಂಗಳವಾರ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಸುರತ್ಕಲ್‌ನಲ್ಲಿ ಹುಟ್ಟಿ, ಬೆಳೆದು ಶಿಕ್ಷಣ ಪೂರೈಸಿ, ಮೆರಿಟ್‌ನಲ್ಲಿ ಇಂಜಿನಿಯರಿಂಗ್ ಸೀಟ್ ಸಿಕ್ಕಿದರೂ ಅದನ್ನು ಬಿಟ್ಟು ದೇಶಸೇವೆಯೇ ಜೀವನದ ಮುಖ್ಯ ಗುರಿ ಎಂದು ಸೈನ್ಯದಲ್ಲಿ ಅಧಿಕಾರಿಯಾಗಿ ಸೇರ್ಪಡೆಯಾಗಿದ್ದ ಎಂಆರ್‌ಪಿಎಲ್‌ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಅವರ ಏಕೈಕ ಪುತ್ರ ಎಂ.ವಿ.ಪ್ರಾಂಜಲ್ ಅವರು ದೇಶದ ರಕ್ಷಣೆಯ ಕಾರ್ಯದಲ್ಲಿ ಅತ್ಯುತ್ತಮ ಸೇವಾ ದಾಖಲೆಯನ್ನು ಹೊಂದಿದ್ದಾರೆ. ಜಮ್ಮುವಿನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಸಂದರ್ಭ ಗುಂಡೇಟಿಗೆ ಬಲಿಯಾಗಿದ್ದು, ಅವರ ಅಪ್ರತಿಮ ದೇಶಪ್ರೇಮ ಇತರರಿಗೆ ಸ್ಫೂರ್ತಿದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ಅವರ ಹುಟ್ಟೂರಿನಲ್ಲಿ ಶಾಶ್ವತವಾಗಿಡುವ ಕೆಲಸ ಆಗಬೇಕು ಎಂದು ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ಈ ಸಂದರ್ಭ ಹೇಳಿದರು.
ವೇದಿಕೆಯ ಗೌರವ ಅಧ್ಯಕ್ಷ ಹುಂಡಿ ಪ್ರಭಾ ಕಾಮತ್, ಪ್ರಧಾನ ಕಾರ್ಯದರ್ಶಿ ಸಂದೀಪ್ ಅಂಬ್ಲಮೊಗರು, ಮುಖಂಡರಾದ ಸಂದೀಪ್, ಅಣ್ಣಪ್ಪ ದೇವಾಡಿಗ, ಹರೀಶ್ ಕಡಂಬೋಡಿ ಉಪಸ್ಥಿತರಿದ್ದರು.