ಜಿಲ್ಲೆ

ಕ್ಯಾಪ್ಟನ್ ಬ್ರಿಜೇಶ್ ಚೌಟ ನಗರ ರೌಂಡ್ಸ್

Mangaluru - Hariprasad Rai




ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಗಳವಾರ ಮಂಗಳೂರಿನ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಮೀನುಗಾರರೊಂದಿಗೆ ಕೆಲ ಸಮಯ ಕಳೆದರು. ನೆರೆದಿದ್ದ ಮೀನುಗಾರರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ವಿವಿಧ ವಯೋಮಾನದ ಇತರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಯುವಕರ ಜೊತೆ ಮಾತುಕತೆ ನಡೆಸಿದರು. ಸೋಮವಾರದಂದು ಕದ್ರಿಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಇದೇ ಸಂದರ್ಭ ವಾಯು ವಿಹಾರದಲಿದ್ದ ಸ್ಥಳೀಯರು, ಮಂಗಳೂರು ಹಿಂದೆಂದಿಗಿಂತ ಹೆಚ್ಚು ಉಷ್ಣತೆ ದಾಖಲಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.