ಜಿಲ್ಲೆ

ಪ್ರತೀ ಬೂತ್‌ನಲ್ಲಿ ನವ (9) ಮಹಿಳೆಯರಿಂದ ಮೊದಲು ಮತ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಶಯ

Mangaluru - Hariprasad Rai



ಮಂಗಳೂರು : ಪ್ರತೀ ಬೂತ್‌ನಲ್ಲಿ 9 ಮಹಿಳೆಯರು ಮೊದಲು ಮತ ಚಲಾಯಿಸುವ ಮೂಲಕ ನವದುರ್ಗೆಯರನ್ನು ಪೂಜಿಸುವ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡಬೇಕೆಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿನಂತಿಸಿದ್ದಾರೆ.
ಬಿಜೆಪಿ ಪುತ್ತೂರು ಮಂಡಲ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ಚುನಾವಣೆಯಲ್ಲಿ ಪ್ರತಿ ಬೂತಿನಲ್ಲಿ 9 ಮಹಿಳೆಯರು ಬೆಳಗ್ಗೆ ಮೊದಲು ಮತ ಚಲಾಯಿಸುವ ಮೂಲಕ ನವದುರ್ಗೆಯರ ಆರಾಧಕ ನರೇಂದ್ರ ಮೋದಿಯವರು ಮತ್ತೆ
ಪ್ರಧಾನಿಯಾಗಲು ಹರಸಬೇಕು ಎಂದರು.
ರಾಷ್ಟ್ರದ ಅಭ್ಯುದಯಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿರುವ ಅದರಲ್ಲೂ ವಿಶೇಷವಾಗಿ ಮಹಿಳೆಯರ ಅಭಿವೃದ್ಧಿಗಾಗಿ ಅನೇಕ
ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿ ಕಾರ್ಯಗತ ಮಾಡಿರುವ ನರೇಂದ್ರ ಮೋದಿಯವರಿಗೆ ಶಕ್ತಿಯನ್ನು ಆರಾಧಿಸುವ ತುಳುನಾಡಿನ ಮಣ್ಣಿನಿಂದ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.