ನಂದಗುಡಿ: ಕ್ಯಾಪ್ಸಿಕಂ ಬೆಳೆದ ರೈತರ ಬದುಕು ಖಾರವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿದ ಬೆಳೆಗೆ ಕವಡೆ ಬೆಲೆಯೂ ಸಿಗದೆ ದಿಕ್ಕು ತೋಚದಂತಾಗಿದ್ದಾರೆ.
ಉತ್ತಮ ಫಸಲು ಬಂದರೆ ಕೆಜಿಗೆ 50 ರಿಂದ 60 ರೂಪಾಯಿಗೆ ಬಿಕರಿಯಾಗುತ್ತಿದ್ದ ಬೆಳೆಯನ್ನು ಈಗ ಕೇಳುವವರೇ ಇಲ್ಲದಂತಾಗಿದೆ. ಇದು ಹೊರ ರಾಜ್ಯ ಹಾಗೂ ವಿದೇಶಗಳಿಗೆ ಹೆಚ್ಚು ಸಾಗಣೆಯಾಗುವ ಬೆಳೆಯಾಗಿದ್ದು, ಮಾರುಕಟ್ಟೆಯಿಲ್ಲದೆ ತೊಂದರೆ ಎದುರಾಗಿದೆ.
ಹೊಸಕೋಟೆ ತಾಲೂಕಿನಾದ್ಯಂತ 300 ಎಕರೆಗೂ ಅಧಿಕವಾಗಿ ಬೆಳೆದಿರುವ ಕ್ಯಾಪ್ಸಿಕಂ ಬೆಳೆ ಮಣ್ಣು ಪಾಲಾಗುವ ಸ್ಥಿತಿ ಎದುರಾಗಿದೆ.
6 ಎಕರೆಯಲ್ಲಿ ಕ್ಯಾಪ್ಸಿಕಂ ನಾಟಿ ಮಾಡಿದ್ದು, 15 ಲಕ್ಷ ರೂ ವೆಚ್ಚ ತಗುಲಿದೆ. ಉತ್ತಮ ಫಸಲು ಬಂದರೂ ಮಾರುಕಟ್ಟೆಗೆ ಬೆಳೆ ಸಾಗಿಸಲಾಗದೆ ನಷ್ಟ ಅನುಭವಿಸುವಂತಾಗಿದೆ ಎಂದು ಓಬಳಹಳ್ಳಿಯ ಎಚ್.ಕೆ. ರಾಜಪ್ಪ ಅಳಲು ತೋಡಿಕೊಂಡಿದ್ದಾರೆ.