ಜಿಲ್ಲೆ

ನೀರು ಪಾಲಾಗುತ್ತಿದ್ದ ಕ್ಯಾಂಟರ್​ ಚಾಲಕನ ರಕ್ಷಣೆ!

ಚಿಂತಾಮಣಿ: ರಭಸವಾಗಿ ಹರಿಯುತ್ತಿದ್ದ ಕುಶಾವತಿ ನದಿಯ ನೀರಿನಲ್ಲಿ ಕೊಚ್ಚಿಹೊಗುತ್ತಿದ್ದ ವ್ಯಕ್ತಿಯೊಬ್ಬರು ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾರೆ. ಚಿಂತಾಮಣಿ-&ಚೇಳೂರು ಮುಖ್ಯ ರಸ್ತೆಯ ಹೊಸಹುಡ್ಯ ಸಮೀಪದ ರಸ್ತೆಯಲ್ಲಿ ಕುಶಾವತಿ ನದಿ ನೀರಿನ ಹರಿವು ಹೆಚ್ಚಳವಾಗಿದ್ದರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ, ಚಾಲಕ ನೀರಿನ ನಡುವೆ ವಾಹನ ಚಲಾಯಿಸಲು ಮುಂದಾಗಿದ್ದು, ಈ ವೇಳೆ ಇಂಜಿನ್​ಗೆ ನೀರು ನುಗ್ಗಿ ವಾಹನ ಕೆಟ್ಟಿದೆ. ಈ ವೇಳೆ ವಾಹನದಿಂದ ಇಳಿದ ಚಾಲಕ ಚೇಳೂರಿನ ಪೆದ್ದೂರು ಗುಂಡ್ಲಹಳ್ಳಿಯ ವಿಜಯ್​ (25) ದಡ ಸೇರಲು ಹೋಗುತ್ತಿದ್ದಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ರಸ್ತೆ ಪಕ್ಕದ ಗುಂಡಿಗೆ ಬಿದ್ದಿದ್ದಾನೆ. ಪಕ್ಕದಲ್ಲಿದ್ದ ಮರದ ಕೊಂಬೆ ಹಿಡಿದು ನಿಂತಿದ್ದ ಆತನನ್ನು ಗ್ರಾಮಸ್ಥರು ರಸಿದ್ದಾರೆ. ಜೆಸಿಬಿಯಿಂದ ಕ್ಯಾಂಟರ್​ಅನ್ನು ದಡಕ್ಕೆ ತರಲಾಯಿತು. ವಿಷಯ ತಿಳಿದ ಅಗ್ನಿಶಾಮಕ ದಳದ ಅಧಿಕಾರಿ ಲೋಕೇಶ್​ ನೇತೃತ್ವದ ತಂಡ, ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿದರು.