ವಿಜಯವಾಣಿ ಸುದ್ದಿಜಾಲ ಧಾರವಾಡ
ಅಕ್ರಮವಾಗಿ ಗಾಂಜಾ ಬೆಳೆದಿದ್ದ ಮತ್ತು ಸಂಗ್ರಹಿಸಿದ ವ್ಯಕ್ತಿಯೊಬ್ಬನನ್ನು ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಪೊಲೀಸರು ಬಂಽಸಿದ್ದಾರೆ. ಅಮ್ಮಿನಬಾವಿ ಗ್ರಾಮದ ಅಶೋಕ ಚನ್ನಬಸಪ್ಪ ಗೋಸಲ ಬಂಽತ ವ್ಯಕ್ತಿ. ಖಚಿತ ಮಾಹಿತಿ ಮೇರೆಗೆ ಸಿಪಿಐ ಶಿವಾನಂದ ಕಮತಗಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಬಸನಗೌಡ ಬಿ.ಎಂ. ಮತ್ತು ಸಿಬ್ಬಂದಿ ಆರೋಪಿ ಅಶೋಕನ ಹೊಲದಲ್ಲಿ ಬೆಳೆದಿದ್ದ 15,000 ರೂಪಾಯಿ ಮೌಲ್ಯದ 167 ಗ್ರಾಂ ಒಣಗಿದ ಗಾಂಜಾ ಮತ್ತು 12,000 ರೂ. ಮೌಲ್ಯದ 159 ಗ್ರಾಂ ಹಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.