ಜಿಲ್ಲೆ

ರೀಲ್ಸ್​ ಗೊತ್ತು ಗಣಿತ ಗೊತ್ತಿಲ್ಲ; 5ನೇ ತರಗತಿ ಪ್ರಶ್ನೆಗೆ ಉತ್ತರಿಸಲಾಗದೆ ಉದ್ಯೋಗಾಕಾಂಕ್ಷಿಗಳ ಒದ್ದಾಟ | Interview

ಸುದೀಪ್​ ವಿ.ಎನ್​

Interview | ಇತ್ತೀಚಿನ ಯುವಕ ಹಾಗೂ ಯುವತಿಯರು ಸೋಷಿಯಲ್​ ಮಿಡಿಯಾದ ಚಟಕ್ಕೆ ಬಿದ್ದು ಮೊಬೈಲ್​ ದಾಸರಾಗಿಬಿಟ್ಟಿದ್ದಾರೆ. ಅದರಲ್ಲೂ Instagram ಉಪಯೋಗಿಸುವುದು ಹೆಚ್ಚಾಗಿದೆ. ಇನ್ನೂ ಬೆಂಗಳೂರಿನಲ್ಲಿ ನಡೆದ ಉದ್ಯೋಗ ಸಂದರ್ಶನವೊಂದರಲ್ಲಿ ಆಕಾಕ್ಷಿಗಳಿಗೆ 5ನೇ ತರಗತಿಯಲ್ಲಿರುವ ಪ್ರಶ್ನೆಯೊಂದನ್ನು ಕೇಳಲಾಗಿದೆ. ಆದರೆ ಅವರು ಆ ಪ್ರಶ್ನೆಗೆ ಉತ್ತರಿಸಲಾಗದೇ ಒದ್ದಾಡಿರುವುದು ಕಂಡುಬಂದಿದೆ. ಇನ್ನೂ ಈ ಬಗ್ಗೆ ಸಂದರ್ಶನ ನಡೆಸಿದಂತಹ ಬೆಂಗಳೂರು ಮೂಲದ ಸಿಇಒ ಆಶಿಶ್ ಗುಪ್ತಾ ಅವರು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್​ ಒಂದನ್ನ ಹರಿಬಿಟ್ಟಿದ್ದಾರೆ.

ಶ್ರೀ ಗುಪ್ತಾ ಅವರು ಇತ್ತೀಚೆಗೆ ನಡೆದ ಕ್ಯಾಂಪಸ್ ನೇಮಕಾತಿ ಅಭಿಯಾನದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಬಿಬಿಎ ಮತ್ತು ಬಿಸಿಎ ಸೇರಿದಂತೆ ವಿವಿಧ ವಿಭಾಗಗಳ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಅವರು ಸಾಮಾನ್ಯವಾಗಿ 5 ನೇ ತರಗತಿಯಲ್ಲಿ ಕಲಿಸಲಾಗುವ ಸರಳ ಗಣಿತ ಪ್ರಶ್ನೆಯನ್ನು ಕೇಳಿದ್ದಾರೆ. ಆಶ್ಚರ್ಯವೆಂದರೆ ಕೇವಲ ಇಬ್ಬರು ವಿದ್ಯಾರ್ಥಿಗಳು ಮಾತ್ರ ಆ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದು, ಉಳಿದವರು ಪ್ರಶ್ನೆಗೆ ಉತ್ತರ ನೀಡಲು ಒದ್ದಾಡಿದ್ದಾರೆ.

ಹಾಗೂ 2ನೇ ಪ್ರಶ್ನೆಯಾಗಿ ಕಂಪನಿಯ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುತ್ತೀರಿ ಎಂದು ಕೇಳಲಾಗಿದ್ದು, ಅವರು Instagram ರೀಲ್‌ಗಳಲ್ಲಿ ಬರುವ ವಿಷಯ ಹಾಗೂ ಡಿಜಿಟಲ್​ ಪ್ರವೃತ್ತಿಗಳ ವಿಷಯವನ್ನು ಉತ್ತರಿಸಿದ್ದಾರೆ.

ಒಂದು ಕಾರು ಮೊದಲ 60 ಕಿಮೀನಲ್ಲಿ ಗಂಟೆಗೆ 30 ಕಿಮೀ ವೇಗದಲ್ಲಿ ಮತ್ತು ಮುಂದಿನ 60 ಕಿಮೀ ಗಂಟೆಗೆ 60 ಕಿಮೀ ವೇಗದಲ್ಲಿ ಚಲಿಸಿದರೆ, ಅದರ ಸರಾಸರಿ ವೇಗ ಎಷ್ಟು ಎಂಬ ಪ್ರಶ್ನೆಯನ್ನ ಕೇಳಲಾಗಿದೆ.

ಆಕಾಂಕ್ಷಿಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಪರಿಣತಿ ಹೊಂದಿದ್ದಾರೆ ಆದರೆ ಮೂಲಭೂತ ಸಮಸ್ಯೆಗೆ ಪರಿಹಾರ, ತಾರ್ಕಿಕತೆ ಮತ್ತು ಆರ್ಥಿಕ ಸಾಕ್ಷರತೆಯನ್ನು ಅವರು ಹೊಂದಿಲ್ಲ. ಈ ಪ್ರವೃತ್ತಿಗಳು ಮುಂದುವರಿದರೆ ವೈಯಕ್ತಿಕ ಹಣಕಾಸು, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳೊಂದಿಗೆ ಹೋರಾಡುವ ಪೀಳಿಗೆಯನ್ನು ನಾವು ಕಾಣಲು ಸಾಧ್ಯವಾಗುವುದಿಲ್ಲ. ಶಿಕ್ಷಣತಜ್ಞರು, ಉದ್ಯೋಗದಾತರು ಮಾರ್ಗದರ್ಶಕರಾಗಿ, ನಾವು ಇದನ್ನ ಸರಿ ಪಡಿಸಬೇಕು. ಇದು ಅವರ ಕಟುವಾದ ವಾಸ್ತವವನ್ನು ಎತ್ತಿ ತೋರಿಸುತ್ತದೆ ಪೋಸ್ಟ್​ ಮಾಡಲಾಗಿದೆ.

ಶ್ರೀ ಗುಪ್ತಾ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದ್ದು, ನೋಡಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ ನೀವು ಗಣಿತದ ಬಗ್ಗೆ ಉತ್ತಮ ಪ್ರಶ್ನೆ ಕೇಳಿದ್ದೀರಿ, ಆದರೆ ಈ ಪ್ರಶ್ನೆಗೂ ನೀವು ಅವರನ್ನು ನೇಮಿಸಿಕೊಳ್ಳುವುದಕ್ಕೂ ಏನು ಸಂಬಂಧವಿದೆ ಎಂದು ಇವರಿಗೆ ಪ್ರಶ್ನಿಸಿದ್ದಾರೆ. ನೀವು ಮಾರಾಟದ ಕೆಲಸ ಮಾಡಿಸಲಿಕ್ಕಾಗಿ ಅವರನ್ನು ನೇಮಿಸಿಕೊಳ್ಳುತ್ತಿದ್ದೀರಾ, ಹಾಗಾದರೆ ಈ ಪ್ರಶ್ನೆಗೆ ಉತ್ತರಿಸುವುದು ಸರಿಯಲ್ಲ. ನೀವು ಗಣಿತ ಬೋಧಕರನ್ನು ನೇಮಿಸಿಕೊಳ್ಳುತ್ತಿದ್ದರೆ, ನಿಮ್ಮ ಪ್ರಶ್ನೆಗೆ ಉತ್ತರಿಸಬಹುದಿತ್ತು. ಅನೇಕ CEO ಗಳಿಗೆ ಸ್ವತಃ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ.