ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ರಾಯಚೂರಿನ ಐಡಿಎಸ್‌ಟಿ ಬಡಾವಣೆಯಲ್ಲಿನ ತಮ್ಮ ಮನೆಯಲ್ಲಿ ಬುಧವಾರ ಮೊಮ್ಮಗನೊಂದಿಗೆ ಟಿವಿ ವೀಕ್ಷಿಸುತ್ತಿರುವುದು. 
ಜಿಲ್ಲೆ

ರಿಲ್ಯಾಕ್ಸ್ ಮೂಡಿನಲ್ಲಿ ಅಭ್ಯರ್ಥಿಗಳು

ರಾಚಯ್ಯ ಸ್ವಾಮಿ

ರಾಯಚೂರು: ಕಳೆದ ಹಲವು ದಿನಗಳಿಂದ ಚುನಾವಣೆ ಗಡಿಬಿಡಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದ ಅಭ್ಯರ್ಥಿಗಳು ಬುಧವಾರ ರಿಲ್ಯಾಕ್ಸ್ ಮೂಡನಲ್ಲಿದ್ದು, ತಮ್ಮ ಮನೆಗಳಲ್ಲಿ ಕುಟುಂಬಸ್ಥರೊಂದಿಗೆ ಸಮಯ ಕಳೆಯುವುದರಲ್ಲಿ ನಿರತರಾಗಿದ್ದರು.
ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ರಾಯಚೂರಿನ ಐಡಿಎಸ್‌ಎಂಟಿ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ಮೊಮ್ಮಗನೊಂದಿಗೆ ಸಮಯ ಕಳೆಯುವುದರ ಜತೆಗೆ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ಜತೆಗೆ ಕ್ಷೇತ್ರದ ಹಲವೆಡೆ ಪಕ್ಷದ ಮುಖಂಡರಿಗೆ ಕರೆ ಮಾಡಿ ಮತದಾನದ ಮಾಹಿತಿ ಪಡೆದುಕೊಂಡರು.
ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರನಾಯಕ ಬೆಳಗ್ಗೆ ಮತಯಂತ್ರಗಳನ್ನು ಇಡಲಾಗಿರುವ ಎಲ್‌ವಿಡಿ ಕಾಲೇಜಿಗೆ ತೆರಳಿ ಭದ್ರತೆಯನ್ನು ವೀಕ್ಷಿಸಿದ ನಂತರ ಅಜಾದ್ ನಗರದಲ್ಲಿನ ಬಾಡಿಗೆ ಮನೆಗೆ ಆಗಮಿಸಿ ಪತ್ರಿಕೆಗಳನ್ನು ಓದುವುದರ ಜತೆಗೆ ತಮ್ಮ ಕುಟುಂಬಸ್ಥರೊಂದಿಗೆ ಸಮಯ ಕಳೆದರು.