ಜಿಲ್ಲೆ

Cake: ಬೆಂಗಳೂರಿನ ಬೇಕರಿಯ ಕೇಕ್​​ಗಳಲ್ಲಿ ಕ್ಯಾನ್ಸರ್​​ಕಾರಕ ಅಂಶ ಪತ್ತೆ

ಬೆಂಗಳೂರು: ಕೇಕ್​​ಗೆ (Cake) ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸರ್​​ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.

ಕೆಲವು ದಿನಗಳ ಹಿಂದೆ ಗೋಬಿ, ಕಬಾಬ್​ ಮತ್ತು ಪಾನಿಪುರಿಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ (Cancer)​ ಕಾರಕ ಅಂಶಗಳು ಪತ್ತೆಯಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FSSAI) ತಿಳಿಸಿತ್ತು. ಇದೀಗ ಕೇಕ್​​ನಲ್ಲಿಯೂ ಕ್ಯಾನ್ಸರ್​​ ಅಂಶ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಕೆಲವು ಬೇಕರಿಯ ಕೇಕ್​​ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 12 ಮಾದರಿಯ ಕೇಕ್​​ಗಳಲ್ಲಿ ಕ್ಯಾನ್ಸರ್​ ಕಾರಕ ಅಂಶ ಪತ್ತೆಯಾಗಿದೆ. ಕೇಕ್​​ ತಯಾರಿಕೆಗೆ ಬಳಸುವ ಬಣ್ಣಗಳು ಅಪಾಯಕಾರಿ ಅಂಶವನ್ನು ಒಳಗೊಂಡಿದೆ ಎನ್ನಲಾಗಿದೆ.

ಕೇಕ್​ ತಯಾರಿಸುವಾಗ ಆಹಾರ ಸುರಕ್ಷತಾ ಪ್ರಾಧಿಕಾರದ ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಆಹಾರ ಸುರಕ್ಷತಾ ಪ್ರಾಧಿಕಾರವು ಬೇಕರಿಗಳಿಗೆ ಸೂಚನೆ ನೀಡಿದೆ.