ಜಿಲ್ಲೆ

ಗಿಡ ನೆಡದ ಅರಣ್ಯವಾಸಿಗಳ ಸದಸ್ಯತ್ವ ರದ್ದು

ಶಿರಸಿ: ಅರಣ್ಯವಾಸಿಗಳಲ್ಲಿ ಅರಣ್ಯ ಪ್ರದೇಶದ ಸಾಂದ್ರತೆ ಹೆಚ್ಚಿಸುವ ಮತ್ತು ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಲಕ್ಷ ವೃಕ್ಷ ನೆಡುವ ಅಭಿಯಾನದಲ್ಲಿ ಗಿಡ ನೆಡದ ಅರಣ್ಯವಾಸಿಗಳ ಸದಸ್ಯತ್ವ ರದ್ದುಪಡಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಶಿರಸಿ ತಾಲೂಕಿನ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪದಾಧಿಕಾರಿಗಳಾದ ನೆಹರು ನಾಯ್ಕ ಬಿಳೂರು, ಕೃಷ್ಣ ಮರಾಠಿ ಮುಂಡಗಾರ್, ಶ್ರೀಕಲಾ ನಾಯ್ಕ ಇಟಗುಳಿ, ಚಂದ್ರಶೇಖರ ಶಾನಭಾಗ ಬಂಡಲ, ಗಂಗೂಬಾಯಿ ರಜಪೂತ, ಮಾಲತೇಶ ಸಂತೊಳ್ಳಿ, ಶಂಕರ ಗೌಡ ಪಾಟೀಲ ಸಂತೊಳ್ಳಿ, ಮಾಬ್ಲೇಶ್ವರ ಪೂಜಾರಿ ಗೌಳಿ, ಸದಾನಂದ ತಿಗಣೆ, ಮೆಹಬೂಬ ಅಲಿ ಬದನಗೋಡ ಇದ್ದರು.