ವಿಕ್ರಮ ನಾಡಿಗೇರ ಧಾರವಾಡ
ಧಾರವಾಡ ಜಿಲ್ಲೆ ಸಂಗೀತಗಾರರ ತವರೂರು, ದಿಗ್ಗಜ ಸಂಗೀತಗಾರರು ಆಗಿ ಹೋಗಿದ್ದಾರೆ ಎಂದು ರಾಜಕಾರಣಿಗಳು ಗಂಟೆಗಟ್ಟಲೆ ಭಾಷಣ ಮಾಡುತ್ತಾರೆ. ಆದರೆ ಅಂತಹ ಮಹನೀಯರ ಹೆಸರನ್ನು ಅಜರಾಮರವಾಗಿಸುವಲ್ಲಿ ರಾಜ್ಯ ಸರ್ಕಾರ ವಿಲವಾಗುತ್ತಿದೆ. ಇದಕ್ಕೆ ದಿಗ್ಗಜ ಸಂಗೀತಗಾರರ ಹೆಸರಿನ ಟ್ರಸ್ಟ್ಗಳಿಗೆ ಸೂಕ್ತ ಅನುದಾನ ನೀಡದ ಕಾರಣ ಸಂಗೀತ ತರಗತಿಗಳು ಬಂದಾಗುತ್ತಿರುವುದೇ ಸಾಕ್ಷಿ.
ಜಿಲ್ಲೆಯ ಮಹಾನ್ ಸಂಗೀತಗಾರರಾದ ಡಾ. ಮಲ್ಲಿಕಾರ್ಜುನ ಮನಸೂರ, ಪಂ. ಬಸವರಾಜ ರಾಜಗುರು ಹೆಸರಿನ ಟ್ರಸ್ಟ್ಗಳಿಂದ ಮಕ್ಕಳಿಗೆ ಸಂಗೀತ ಪಾಠ ನಡೆಸಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರದ ಅನುದಾನ ಕಡಿಮೆ ಬರುತ್ತಿರುವ ಕಾರಣ ಎರಡೂ ಕಡೆಗಳಲ್ಲಿ ಸಂಗೀತದ ಸ್ವರ ಕೇಳದಂತಾಗಿ ತರಗತಿಗಳು ಮೌಕ್ಕೆ ಜಾರಿವೆ.
ಮೊದಲಿನ ದಿನಗಳಲ್ಲಿ ಪ್ರತಿ ಟ್ರಸ್ಟ್ಗೆ ಅಂದಾಜು 15 ಲಕ್ಷ ರೂ. ಅನುದಾನ ಬರುತ್ತಿತ್ತು. ಕರೋನಾ ಕಾರಣಕ್ಕೆ ಕಡಿತವಾದ ಅನುದಾನ ಮೊದಲಿನ ಹಂತಕ್ಕೆ ತಲುಪಿಲ್ಲ. ಸರ್ಕಾರದ ಅನುದಾನದಲ್ಲಿ ಸಿಬ್ಬಂದಿ ವೇತನ ನೀಡಿ ಸಾಂಸತಿಕ ಕಾರ್ಯಕ್ರಮ ನಡೆಸುವುದೇ ಕಷ್ಟ. ಹೀಗಾಗಿ ಮನಸೂರ ಟ್ರಸ್ಟ್ನ ತರಗತಿಗಳು 4-5 ತಿಂಗಳಿಂದ ಸ್ಥಗಿತವಾಗಿದ್ದರೆ, ರಾಜಗುರು ಟ್ರಸ್ಟ್ನ ತರಗತಿಗಳು ಸ್ಥಗಿತವಾಗಿ ವರ್ಷಗಳೇ ಉರುಳಿವೆ. ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದು ಸಾಂಸತಿಕ ಲೋಕದ ಬಗ್ಗೆ ರಾಜಕಾರಣಿಗಳಿಗೆ ಇರುವ ಆಸಕ್ತಿ ತೋರುತ್ತದೆ.
ಡಾ. ಮಲ್ಲಿಕಾರ್ಜುನ ಮನಸೂರ, ಪಂ. ಬಸವರಾಜ ರಾಜಗುರು ಟ್ರಸ್ಟ್ಗಳಿಂದ ಪ್ರತಿ ವರ್ಷ ಒಬ್ಬ ಹಿರಿಯ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ಇಬ್ಬರು ಕಲಾವಿದರಿಗೆ ಯುವ ಪ್ರಶಸ್ತಿ ನೀಡಲಾಗುತ್ತದೆ. ರಾಷ್ಟ್ರಿಯ ಪ್ರಶಸ್ತಿ 1 ಲಕ್ಷ ರೂ. ಹಾಗೂ ಯುವ ಪ್ರಶಸ್ತಿ ತಲಾ 25 ಸಾವಿರ ರೂ. ಒಳಗೊಂಡಿದೆ. ಸರ್ಕಾರ ನೀಡುವ ಅನುದಾನದಲ್ಲಿ ಪ್ರಶಸ್ತಿಗಳ ಮೊತ್ತ, ಕಾರ್ಯಕ್ರಮಕ್ಕೆ ಆಗಮಿಸುವ ಕಲಾವಿದರಿಗೆ ಸಂಭಾವನೆ, ಜತೆಗೆ ವರ್ಷ ರ್ಪೂತಿ ನಡೆಸುವ ಕಾರ್ಯಕ್ರಮಗಳಿಗೆ ವ್ಯಯಿಸಲಾಗುತ್ತಿದೆ. ಉಳಿದಂತೆ ಸಿಬ್ಬಂದಿ ವೇತನಕ್ಕೆ ಅನುದಾನದ ಕೊರತೆ ಎದುರಾಗುತ್ತಿದೆ.
ಕೆಲ ತಿಂಗಳ ಹಿಂದಷ್ಟೇ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಬಂದಾದಾಗ ಸ್ಥಳಿಯರ ಜನಪ್ರತಿನಿಧಿಗಳು ಸೇರಿ ಅನೇಕರು ಧ್ವನಿ ಎತ್ತಿದ್ದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೇ ಹಾದಿಯಲ್ಲಿ ಉಳಿದ ಮಹನೀಯರ ಟ್ರಸ್ಟ್ಗಳೂ ಸಾಗುತ್ತಿವೆ. ಹೀಗಾಗಿ ದಿಗ್ಗಜರ ಹೆಸರಿನಲ್ಲಿ ನಡೆಯುತ್ತಿರುವ ತರಗತಿಗಳು ಶಾಶ್ವತವಾಗಿ ಬಂದಾಗದಂತೆ ಉಳಿಸುವ ಪ್ರಯತ್ನಕ್ಕೆ ಜನಪ್ರತಿನಿಧಿಗಳು ಮುಂದಾಗಬೇಕು ಎಂಬುದು ಸಂಗೀತಾಸಕ್ತರ ಆಶಯವಾಗಿದೆ.
ರಾಜ್ಯ ಸರ್ಕಾರ ಟ್ರಸ್ಟ್ಗಳಿಗೆ ನೀಡುವ ಅನುದಾನದಲ್ಲಿ ಸಾಂಸತಿಕ ಕಾರ್ಯಕ್ರಮ ಹಾಗೂ ಸಿಬ್ಬಂದಿ ವೇತನ ಎರಡನ್ನೂ ನಿಭಾಯಿಸುವುದು ಕಷ್ಟ. ಸಾಂಸತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ ಬೇಕಿರುವ ಕಾರಣಕ್ಕೆ ಸಿಬ್ಬಂದಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಸುಮಾರು 3&-4 ತಿಂಗಳಿಂದ ಸಂಗೀತ ತರಬೇತಿ ಸ್ಥಗಿತವಾಗಿದೆ. ಸರ್ಕಾರ ಸಬ್ಬಂದಿ ವೇತನಕ್ಕೆ ಪ್ರತ್ಯೇಕ ಅನುದಾನ ಮೀಸಲಿಡಬೇಕು.
- ಪಂ. ಎಂ. ವೆಂಕಟೇಶಕುಮಾರ, ಮನ್ಸೂರ ಟ್ರಸ್ಟ್ ಸದಸ್ಯ
ರಾಜಗುರು ಟ್ರಸ್ಟ್ ವತಿಯಿಂದ ನಡೆಸುವ ಸಂಗೀತ ತರಗತಿಗೆ ಸುಮಾರು 30 ವಿದ್ಯಾಥಿರ್ಗಳು ಆಗಮಿಸುತ್ತಿದ್ದರು. ಆದರೆ ಕರೋನಾ ನಂತರದಲ್ಲಿ ಸರ್ಕಾರ ಅನುದಾನ ಕಡಿತ ಮಾಡಿದ್ದರಿಂದ ತರಗತಿ ಬಂದಾಗಿದೆ. ಸರ್ಕಾರದ ಅನುದಾನದಲ್ಲಿ ಸಂಗೀತ ಕಾರ್ಯಕ್ರಮ, ಪ್ರಶಸ್ತಿ ನೀಡುವುದು ಸೇರಿ ಸಿಬ್ಬಂದಿ ವೇತನ ಪಾವತಿ ಕಷ್ಟವಾಗಿದೆ. ಸರ್ಕಾರ ಅನುದಾನ ಹೆಚ್ಚಿಸಿದರೆ ಮತ್ತೆ ತರಗತಿ ಆರಂಭವಾಗಲಿದೆ.
-ನಿಜಗುಣ ರಾಜಗುರು, ರಾಜಗುರು ಟ್ರಸ್ಟ್ ಸದಸ್ಯ
ಟ್ರಸ್ಟ್ಗಳಿಗೆ ಕಳೆದ ವರ್ಷ ಸರ್ಕಾರದಿಮದ ತಲಾ 10 ಲಕ್ಷ ರೂ. ಅನುದಾನ ಬಂದಿದೆ. ಪ್ರಸಕ್ತ ಸಾಲಿನ ಅನುದಾನ ಬರಬೇಕಿದೆ. ಸಂಗೀತ ತರಗತಿಗಳನ್ನು ಮತ್ತೆ ಆರಂಭಿಸಲು ಅನುದಾನ ಕೊರತೆ ಇಲ್ಲ. ಈ ವಿಷಯವಾಗಿ ಸಂಬಂಧಿಸಿದ ಟ್ರಸ್ಟ್ ಪದಾಧಿಕಾರಿಗಳ ಜತೆಗೆ ಚಚಿರ್ಸಲಾಗಿದೆ.* ಕುಮಾರ ಬೆಕ್ಕೇರಿ, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸತಿ ಇಲಾಖೆ.