ಜಿಲ್ಲೆ

ಶ್ರೀರಾಮನ ಆದರ್ಶಗಳು ಬದುಕಿಗೆ ಪ್ರೇರಣೆ ಕೆನರಾ ಶಾಲೆಯಲ್ಲಿ ಶ್ರೀರಾಮ ವೈಭವ ಉದ್ಘಾಟಿಸಿ ಚಕ್ರವರ್ತಿ ಸೂಲಿಬೆಲೆ ಅಭಿಮತ

ಮಂಗಳೂರು: ಶ್ರೀ ರಾಮನ ಆದರ್ಶಗಳು ಬದುಕಿಗೆ ಪ್ರೇರಣೆ. ನಮಗೆ ಚಿತ್ರನಟರು ರೋಲ್‌ಮಾಡೆಲ್ ಆಗುವ ಬದಲು ಶ್ರೀ ರಾಮನನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಬೇಕು ಎಂದು ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.


ಡೊಂಗರಕೇರಿಯ ಕೆನರಾ ಕಿರಿಯ ಪ್ರಾಥಮಿಕ ಶಾಲೆಯ ಶ್ರೀ ಕೃಷ್ಣ ಮಂದಿರದಲ್ಲಿ ಬುಧವಾರ ಶ್ರೀ ರಾಮ ವೈಭವ ಉದ್ಘಾಟಿಸಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಎಲ್ಲೆಡೆ ರಾಮ ರಾಜ್ಯದ ಸಾಕಾರವಾಗಲು ನಾವೆಲ್ಲ ಪಣತೊಡಬೇಕು. ರಾಮನ ಒಂದೊಂದು ಗುಣಗಳು ಕೂಡ ನಮಗೆ ಪಾಠ. ರಾಮಾಯಣ ಓದಿದರೆ ಅಥವಾ ಅಯೋಧ್ಯೆಯ ರಾಮ ಮಂದಿರದ ಸಂಭ್ರಮದಲ್ಲಿ ಪಾಲ್ಗೊಂಡರೆ ಮಾತ್ರ ಸಾಲದು. ಬದಲಾಗಿ ರಾಮನ ಆದರ್ಶ ನಡೆ ನುಡಿಗಳು ನಮ್ಮ ಅಂತರಾತ್ಮದಲ್ಲಿ ನೆಲೆಯಾದರೆ ರಾಮರಾಜ್ಯ ಸಾಕಾರಾವಾದಂತೆ ಎಂದರು.

\
ರಾಮನ ಸಹೋದರ ಪ್ರೇಮ, ಸ್ಮಿತ ಭಾಷೆ, ಸದ್ಗುಣ, ತಂದೆ-ತಾಯಿ ಮಾತಿನ ಪಾಲನೆ ಸಹಿತ ವಿವಿಧ ಆಯಾಮದ ನಡೆ ನುಡಿಗಳು ಎಂದೆಂದಿಗೂ ಅಜರಾಮರ ಎಂದರು.


ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ವಾಸುದೇವ ಕಾಮತ್, ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್, ಖಜಾಂಚಿ ವಾಮನ್ ಕಾಮತ್, ಆಡಳಿತ ಮಂಡಳಿ ಸದಸ್ಯರಾದ ಕೆ.ಸುರೇಶ್ ಕಾಮತ್, ಟಿ.ಗೋಪಾಲಕೃಷ್ಣ ಶೆಣೈ, ಬಸ್ತಿ ಪುರುಷೋತ್ತಮ ಶೆಣೈ, ಎಂ.ನರೇಶ್ ಶೆಣೈ, ಶಿವಾನಂದ ಶೆಣೈ, ಯೋಗೀಶ್ ಆರ್.ಕಾಮತ್, ಅಶ್ವಿನಿ ಕಾಮತ್, ಪಿಆರ್‌ಒ ಉಜ್ವಲ್ ಮಲ್ಯ ಎಸ್., ಆಡಳಿತಾಧಿಕಾರಿ ಡಾ.ದೀಪ್ತಿ ನಾಯಕ್, ಮಹಾತ್ಮಾ ಗಾಂಧಿ ಮ್ಯೂಸಿಯಂ ನಿರ್ದೇಶಕ ಪಯ್ಯನ್ನೂರು ರಮೇಶ್ ಪೈ ಸಹಿತ ಪ್ರಮುಖರು ಉಪಸ್ಥಿತರಿದ್ದರು.


ಶಿಕ್ಷಕರಾದ ಸಂಧ್ಯಾ ಸ್ವಾಗತಿಸಿದರು. ಪ್ರದೀಪ್ ನಿರೂಪಿಸಿದರು. ಜಯರಾಮ್ ವಂದಿಸಿದರು.