ಕವಿತಾಳ ಸಮೀಪದ ಕಲಂಗೇರ ಹತ್ತಿರದ 9ಎ ನಾಲೆಯ ಕಾಮಗಾರಿ ಸ್ಥಳದಲ್ಲಿ ರೈತರು ಪ್ರತಿಭಟನೆ ನಡೆಸಿದರು. ರೈತರಾದ ಶಿವಕುಮಾರಗೌಡ ವಟಗಲ್, ಶಂಕರಗೌಡ ಗುಡದಿನ್ನಿ, ತಿಮ್ಮನಗೌಡ ಹಣಗಿ, ಮಲ್ಲಯ್ಯ ಪೂಜಾರಿ, ನಿಂಗಣ್ಣ ನಾಸಲ್, ಶರಣಪ್ಪ ಪಾತಪೂರ ಉಪಸ್ಥಿತರರಿದ್ದರು 
ಜಿಲ್ಲೆ

ಕಾಲುವೆ ಕಾಮಗಾರಿ ಪೂರ್ಣಗೊಳಿಸಿ

Kopala - Desk - Eraveni

ಕವಿತಾಳ: ಸಮೀಪದ ಕಲಂಗೇರ 9ಎ ವಡವಟ್ಟಿ ಶಾಖ ಕಾಲುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರೈತರು ಒತ್ತಾಯಿಸಿ ಕಾಲುವೆ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಹದಿಮೂರು ವರ್ಷದಿಂದ 9ಎ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಶಾಸಕರು, ಮಂತ್ರಿಗಳು ಕಾಮಗಾರಿ ಪೂರ್ಣಗೊಳಿಸಲು ಸ್ಪಂದಿಸುತ್ತಿಲ್ಲ. ಕಳೆದ ಆರು ತಿಂಗಳ ಹಿಂದೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಭೇಟಿ ನೀಡಿ, ಕಾಮಗಾರಿ ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಪ್ರಯೋಜನವಾಗಿಲ್ಲ.

ನಾಲೆಯ ನೀರನ್ನು ನಂಬಿ ರೈತರು ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಆದಷ್ಟು ಬೇಗ ನಾಲೆ ಕಾಮಮಗಾರಿ ಮುಗಿಸಿ ನೀರನ್ನು ಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಹೋರಾಟ ಮಾಡಲಾಗುವುದು ಎಂದು ರೈತರಾದ ಶಿವಕುಮಾರ, ಶಂಕರಗೌಡ ಗುಡದಿನ್ನಿ, ತಿಮ್ಮನಗೌಡ ಹಣಗಿ, ಮಲ್ಲಯ್ಯ ಪೂಜಾರಿ, ನಿಂಗಣ್ಣ ನಾಸಲ್, ಶರಣಪ್ಪ ಪಾತಪೂರ ಎಚ್ಚರಿಸಿದ್ದಾರೆ.