ಕಂಪ್ಲಿ ರೈತ ಸಂಘದ ಪದಾಧಿಕಾರಿಗಳು ಮುನಿರಾಬಾದಿನ ನೀರಾವರಿ ನಿಗಮದ ಮುಖ್ಯ ಅಭಿಯಂತರ ಎಲ್.ಬಸವರಾಜುಗೆ ಮನವಿ ಸಲ್ಲಿಸಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಭರಮರೆಡ್ಡಿ, ತಾಲೂಕು ಅಧ್ಯಕ್ಷ ವಿ.ವೀರೇಶ, ನಗರ ಅಧ್ಯಕ್ಷ ಕೆ.ರಮೇಶ್, ಎಚ್.ವೀರಭದ್ರಗೌಡ, ಸಿ.ಕೊಟ್ರೇಶ್ ಇತರರಿದ್ದರು. 
ಜಿಲ್ಲೆ

ಕಾಲುವೆಗಳಿಗೆ ಬೇಗ ನೀರು ಹರಿಸಿ

Kopala - Desk - Eraveni

ಕಂಪ್ಲಿ: ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮುನಿರಾಬಾದ್ ನೀರಾವರಿ ನಿಗಮದ ಮುಖ್ಯ ಅಭಿಯಂತರ ಎಲ್.ಬಸವರಾಜಗೆ ಸೋಮವಾರ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಜಲಾಶಯಕ್ಕೆ ದಿನೇ ದಿನೆ ನೀರಿನ ಒಳಹರಿವು ಹೆಚ್ಚಾಗುತ್ತಿದ್ದು ಹರ್ಷ ತಂದಿದೆ. ರೈತರು ಬೆಳೆ ಬೆಳೆಯಲು ಕೂಡಲೇ ನೀರಾವರಿ ಸಲಹಾ ಸಮಿತಿ (ಐಸಿಸಿ)ಸಭೆ ಕರೆಯಬೇಕು. ಎಚ್.ಎಲ್.ಸಿ, ಎಲ್.ಎಲ್.ಸಿ ಹಾಗೂ ವಿಜಯನಗರ ಕಾಲುವೆಗಳಿಗೆ ನೀರು ಹರಿಸಬೇಕು. ತಡವಾದರೆ ಹವಾಮಾನ ವ್ಯತ್ಯಾಸದಿಂದ ರೈತರಿಗೆ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದರು.