ಜಿಲ್ಲೆ

ಕಾಲುವೆ ಅರ್ಧ ತೊಂದರೆ ಪೂರ್ತಿ

ನಾಗರಾಜ ಜೋರಾಪುರ ಚನ್ನಮ್ಮನ ಕಿತ್ತೂರು

ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆರೆ ತುಂಬಿ ಹರಿಯುವಾಗ ಹೆಚ್ಚಿನ ನೀರು ಹೋಗಲೆಂದು ನಿರ್ಮಿಸಿರುವ ಕಾಲುವೆ 17ನೇ ವಾರ್ಡಿನ ನಿವಾಸಿಗಳಿಗೆ ಆರೋಗ್ಯ ಭೀತಿ ತಂದೊಡ್ಡಿದೆ.

ಕಾಲುವೆಯನ್ನು ಕೇವಲ 250 ಮೀ.ವರೆಗೆ ಮಾಡಿ ಅರ್ಧಕ್ಕೆ ಬಿಟ್ಟಿದ್ದರಿಂದ ನೀರು ಮುಂದೆ ಸಾಗದೆ ನಿಂತಲ್ಲೇ ನಿಂತು ಗಬ್ಬು ವಾಸನೆ ಬೀರುತ್ತಿದೆ. ನೋಣ&ಸೊಳ್ಳೆಗಳ ಕಾಟದಿಂದ ನಿವಾಸಿಗಳು ದಿನನಿತ್ಯವೂ ಸಂಕಷ್ಟ ಅನುಭವಿಸುತ್ತಿದ್ದು, ರೋಗ ಭೀತಿ ಎದುರಿಸುತ್ತಿದ್ದೇವೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರಿ ಜಾಗ ಅತಿಕ್ರಮಣದಿಂದ ತೊಂದರೆ: 17ನೇ ವಾರ್ಡ್​ ಅಂದರೆ ರಾಜ್ಯಮಾರ್ಗದ ಎಸ್​ಬಿಐ ಬ್ಯಾಂಕ್​ ಹಿಂದೆ ಮೊದಲಿನಿಂದಲೂ ಚರಂಡಿ ನೀರು ಹಾಯ್ದು ಹೋಗಲು ಸರ್ಕಾರಿ ಜಾಗ ಇತ್ತು. ಆದರೆ, ಇಲ್ಲಿ ಬಾಡಿಗೆಗೆ ಹೆಚ್ಚು ಬೇಡಿಕೆ ಇರುವ ಕಾರಣ ಇದ್ದ ರಾಜ ಕಾಲುವೆ ಅತಿಕ್ರಮದಿಂದ ಮುಚ್ಚಿ ಹೋಗಿ ಅದರ ಮೇಲೆ ಕಟ್ಟಡ ನಿರ್ಮಾಣವಾಗಿವೆ. ಇದರಿಂದ ಇಲ್ಲಿ ಚರಂಡಿಯ ನೀರು ಸಾಗಲು ಜಾಗ ಇಲ್ಲವಾಗಿದೆ. ಕಾಲುವೆಯ ಜಾಗ ಅತಿಕ್ರಮವಾಗಿದೆ ಎಂದು ಗೊತ್ತಿದ್ದರೂ ಅಧಿಕಾರಿಗಳು 250 ಮೀಟರ್​ ಕಾಲುವೆ ಕಾಮಗಾರಿ ಮಾಡಿ ಕೈ ತೊಳೆದುಕೊಂಡಿದ್ದಾರೆ.

ಕೆರೆಯಿಂದ ಹೆಚ್ಚುವರಿ ಸಾಗಲೆಂದು ನಿರ್ಮಿಸಿರುವ ಈ ಕಾಲುವೆ ಈಗ ಚರಂಡಿಯಾಗಿ ನಿರ್ಮಾಣವಾಗಿದ್ದು, ಕಾಲುವೆಗೆ ಚರಂಡಿ ನೀರು ಸೇರಿ ದುರ್ವಾಸನೆ ಬೀರುತ್ತಿದೆ. ಇದು ನಿವಾಸಿಗಳಿಗೆ ಮತ್ತೊಂದು ಸಂಕಷ್ಟ ತಂದಿದೆ. ಚರಂಡಿಯ ಗಲೀಜು ನೀರು ಮಡುಗಟ್ಟಿ ನಿಂತಿದ್ದರಿಂದ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ಅತಿಕ್ರಮವಾಗಿರುವ ಸರ್ಕಾರಿ ಕಾಲುವೆಯ ಜಾಗ ತೆರವುಗೊಳಿಸಿ ಸಾರ್ವಜನಿಕ ಚರಂಡಿ ನಿರ್ಮಿಸಬೇಕು. ಮಳೆಗಾಲದ ಮುಂಚೆ ಈ ಕಾಮಗಾರಿ ಪೂರ್ಣಗೊಳಿಸಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೆರೆ ಅಭಿವೃದಿಟಛಿ ಯೋಜನೆಯಲ್ಲಿ 250 ಮೀಟರ್​ ಕಾಲುವೆ ನಿರ್ಮಿಸಲು ಅನುದಾನ ಮಂಜೂರಾಗಿದೆ. ಮುಂದಿನ ಕಾಮಗಾರಿ ಮಂಜೂರಾದ ನಂತರ ಕಾಲುವೆ ಪೂರ್ಣಗೊಳಿಸುತ್ತೇವೆ. ಚರಂಡಿ ನೀರು ಕಾಲುವೆಗೆ ಸೇರದಂತೆ ಕ್ರಮ ವಹಿಸಬೇಕೆಂದು ಪಪಂ ಮುಖ್ಯಾಧಿಕಾರಿಗೆ ಸೂಚಿಸಿದ್ದೇವೆ.

> ಎಂ.ಆರ್​. ಪಾಟೀಲ

ಸಣ್ಣ ನೀರಾವರಿ ಇಲಾಖೆ ಅಧಿಕಾರಿ