ವಿಜಯಪುರ : ನಗರದ ಬಿಎಲ್ಡಿಇ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆ (ಐಟಿಐ) ಯಲ್ಲಿ ಮೇ 24 ರಂದು ಅಪ್ರೆಂಟಿಸ್ ತರಬೇತಿಗಾಗಿ ಬೆಂಗಳೂರಿನ ಟೊಯೊಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಕಂಪನಿ ವತಿಯಿಂದ ಕ್ಯಾಂಪಸ್ ಸಂದರ್ಶನ ನಡೆಯಲಿದೆ.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಂಯುಕ್ತಾಶ್ರಯದಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದ್ದು, 18 ರಿಂದ 23 ವರ್ಷದೊಳಗಿನ ಮತ್ತು ಐಟಿಐ ಯಾವುದೇ ಟ್ರೇಡ್ನಲ್ಲಿ ಪಾಸಾದ ತರಬೇತುದಾರರು ಭಾಗವಹಿಸಬಹುದಾಗಿದೆ. ಲಿಖಿತ ಪರೀೆ ಮತ್ತು ಮೌಖಿಕ ಸಂದರ್ಶನ ನಡೆಯಲಿದೆ.
ಪ್ರಸಕ್ತ ಶೈಣಿಕ ವರ್ಷದ ಅಂತಿಮ ವರ್ಷದ ಐಟಿಐ ತರಬೇತಿದಾರರೂ ಕೂಡ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ. 9964658059 ಮತ್ತು 9916853605ಕ್ಕೆ ಸಂಪರ್ಕಿಸುವಂತೆ ಕಾಲೇಜಿನ ಪ್ರಾಚಾರ್ಯ ಎಂ.ಡಿ. ಪಡಸಲಗಿ ತಿಳಿಸಿದ್ದಾರೆ.