ಚಿಕ್ಕೋಡಿ: ಇಲ್ಲಿನ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ 7ನೇಯ ಸೆಮಿಸ್ಟರ್ನ 15 ವಿದ್ಯಾರ್ಥಿಗಳು ಇನ್ಫೋಸಿಸ್ ಕಂಪನಿ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಶ್ರೇಯಾ ಸಂಕಪಾಳ, ಲಕ್ಷಿ$್ಮ ಹುಳಿಕೊಪ್ಪೆ, ಮಹಾಲಕ್ಷಿ$್ಮ ಅರಮಣಿ, ನಿಶಾ ಲಟ್ಟೆ, ಸಾ ನಾಯಿಕ, ಶ್ರುತಿ ಗಾಯಕವಾಡ, ಸಹನಾ ರುಗೆ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಪ್ರಜ್ಞಾ ಮುತಾಲಿಕ ದೇಸಾಯಿ, ಶ್ರೇಯಾ ಕಟ್ಟಿಮನಿ, ಧನಶ್ರೀ ಪಾಟೀಲ, ಪೂರ್ಣಿಮಾ ಖೋತ, ಭಾವನಾ ಮಹಾಶೆಟ್ಟಿ, ನಿಕಿತಾ ಪಾಟೀಲ, ಎಂಸಿಎ ವಿಭಾಗದ ಭುವನೇಶ್ವರಿ ಶಿಂಧೆ, ಕರಿಶ್ಮಾ ನದಾಫ್ ಜತೆಗೆ ಟಿಸಿಎಸ್, ಕಾರ್ಮಿಕ್, ಕೊಡನೆಸ್ಟ್, ಅರ್ಬಿಸ್ಟ್ರಕ್ಚರ್ ಪೆವೆಟ್ ಲಿಮಿಟೆಡ್, ಇನಾ ಮಾರ್ಕೆಟ್ ಕಂಪನಿಗಳಿಗೆ 135 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜ್ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.