ಹುಬ್ಬಳ್ಳಿ: ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಔದ್ಯೋಗಿಕ ನೆಲೆ ಒದಗಿಸುವ ದಿಸೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಕ್ಟೋಬರ್ 6 ಹಾಗೂ 7ರಂದು ದಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿ ಕಾಲೇಜು ಆವರಣದಲ್ಲಿ ಆಳ್ವಾಸ್ ಪ್ರಗತಿ 2023 ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದು ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2007ರಿಂದ ಆಳ್ವಾಸ್ ಶಿಣ ಪ್ರತಿಷ್ಠಾನ ಉದ್ಯೋಗ ಮೇಳ ಆಯೋಜಿಸುತ್ತ ಬಂದಿದೆ. ಈ ಭಾಗದ ಆಕಾಂಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಬೇಕು ಎಂದರು.
13ನೇ ಉದ್ಯೋಗ ಮೇಳದಲ್ಲಿ ಬಿಎ್ಎಸ್ಐ, ಐಟಿ ಕಂಪನಿಗಳು, ಉತ್ಪಾದನೆ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಹಾಸ್ಪಿಟಾಲಿಟಿ, ಟೆಲಿಕಮ್ಯುನಿಕೇಶನ್, ಆರೋಗ್ಯ, ಮಾಧ್ಯಮ, ನಿರ್ಮಾಣ, ಶಿಣ, ಸರ್ಕಾರೇತರ ಸಂಸ್ಥೆ ಹೀಗೆ ಸುಮಾರು 200ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ ಎಂದರು.
ಹೊರ ಜಿಲ್ಲೆಗಳಿಂದ ಬರುವ ಉದ್ಯೋಗ ಆಕಾಂಗಳಿಗೆ ಅ. 5ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಭ್ಯಥಿರ್ಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
ಆಳ್ವಾಸ್ ಪ್ರಗತಿ ಸಂಯೋಜಕ ಡಾ. ಗುರುಶಾಂತ ವಗ್ಗರ್, ಗ್ಲೋಬಲ್ ಮೀಡಿಯಾದ ದಿನೇಶ ಶೆಟ್ಟಿ, ಹು&ಧಾ ಬಂಟರ ಸಂದ ಅಧ್ಯ ಸುಗ್ಗಿ ಸುಧಾಕರ ಶೆಟ್ಟಿ, ಸತೀಶ ಶೆಟ್ಟಿ ಗೋಷ್ಠಿಯಲ್ಲಿದ್ದರು.