ವಿಜಯಪುರ: ನಗರದ ಬಿಎಲ್ಡಿಇ ಸಂಸ್ಥೆ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಮೇ 24 ರಂದು ಕ್ಯಾಂಪಸ್ ಸಂದರ್ಶನ ನಡೆಯಲಿದೆ.
ಬೆಂಗಳೂರಿನ ಟೊಯೋಟಾ ಇಂಡಸ್ಟ್ರೀಸ್ ಇಂಜಿನ್ ಕಂಪನಿ ವತಿಯಿಂದ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ.
2023 ಮತ್ತು 2024ನೇ ಶೈಣಿಕ ವರ್ಷದಲ್ಲಿ ಪಾಸಾದ ವಿದ್ಯಾರ್ಥಿಗಳು ಹಾಗೂ 2025ರಲ್ಲಿ 6ನೇ ಸೆಮಿಸ್ಟರ್ ಪರೀೆಗೆ ಹಾಜರಾದ ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಹಾಗೂ ಅಟೋಮೊಬೈಲ್ ವಿಭಾಗದ ವಿದ್ಯಾರ್ಥಿಗಳು ಸದರಿ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಮಾಹಿತಿಗೆ ಕಾಲೇಜಿನ ಪ್ರಾಚಾರ್ಯ ಪಿ.ಬಿ. ಕಳಸಗೊಂಡ ಮತ್ತು ಉದ್ಯೋಗಾಧಿಕಾರಿ ಸುಧನ್ವ ಕುಲಕರ್ಣಿ ಹಾಗೂ ಮೊ.9480415049 ಮತ್ತು 9449246255ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.