ಹುಬ್ಬಳ್ಳಿ: ಬೆಂಗಳೂರಿನ ಟ್ರಾಕ್ಟರ್ ಹಾಗೂ ಫಾರ್ಮಾ ಇಕ್ವಿಪ್ಮೆಂಟ್ ಲಿಮಿಟೆಡ್ (ಟಾಫೆ) ಇಲ್ಲಿಯ ಕೆಎಲ್ಇ ಸಂಸ್ಥೆಯ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್ ನಲ್ಲಿ ಮಾ. 29ರಂದು ಬೆಳಗ್ಗೆ 9ಕ್ಕೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದೆ.
ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗೆ ಪ್ಲೇಸ್ ಮೆಂಟ್ ಆಫೀಸರ್ ಪ್ರೊ. ಸಂತೋಷ ಕಂಠಿ ಅವರನ್ನು ಸಂಪರ್ಕಿಸಲು ಪ್ರಾಚಾರ್ಯ ಪ್ರೊ. ವೀರೇಶ ಅಂಗಡಿ ಕೋರಿದ್ದಾರೆ.