ಜಿಲ್ಲೆ

ಕ್ಯಾಂಪಸ್​ ಸಂದರ್ಶನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ವಿದ್ಯಾಗಿರಿಯ ಜೆಎಸ್​ಎಸ್​ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಬೆಂಗಳೂರಿನ ಇಂಡಿಯಾ ಲಿಟರೆಸಿ ಪ್ರೊಜೆಕ್ಟ್​ ನೆಟ್​ ಆರ್ಗನೈಸೇಶನ್​ ಕಂಪನಿ ವತಿಯಿಂದ ಜೂ. 9ರಂದು ಬೆಳಗ್ಗೆ 9.30ಕ್ಕೆ ಜೆಎಸ್​ಎಸ್​ ಉತ್ಸವ ಭವನದಲ್ಲಿ ಕ್ಯಾಂಪಸ್​ ಸಂದರ್ಶನ ಏರ್ಪಡಿಸಲಾಗಿದೆ.
ಡಿವಿಜನಲ್​ ಕೋ&ಆಡಿರ್ನೇಟರ್​ ಹಾಗೂ ಟೆಕ್ನಿಕಲ್​ ೆಸಿಲೇಟರ್​ ಹುದ್ದೆಗಳಿಗೆ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿರಸಿ, ಉತ್ತರ ಕನ್ನಡ, ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು, ಯಾದಗಿರಿ, ಕಲಬುಗಿರ್, ಬೀದರ್​ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯಥಿರ್ಗಳು ಭಾಗವಹಿಸಬಹುದು.
ಸಂದರ್ಶನಕ್ಕೆ ಹಾಜರಾಗುವ ಅಭ್ಯಥಿರ್ಗಳು ಬಿಎಸ್ಸಿ(ಸಿಎಸ್​), ಬಿಸಿಎ, ಬಿಎಸ್ಸಿ(ಬಿಎಡ್​&ಸಿಎಸ್​), ಎಂಎಸ್ಸಿ, ಎಂಸಿಎ ಪದವಿಗಳಲ್ಲಿ ಯಾವುದಾದರು ಪದವಿ ಹೊಂದಿರಬೇಕು. ಸಂದರ್ಶನಕ್ಕೆ ಬಯೋಡೆಟಾ, ಭಾವಚಿತ್ರ, ಅಂಕಪಟ್ಟಿ ನಕಲು ಪ್ರತಿ ತರಬೇಕು. ಆಸಕ್ತರು ಹೆಚ್ಚಿನ ಮಾಹಿತಿಗೆ ಕಾಲೇಜು ಸಂಪಕಿರ್ಸಬಹುದು ಎಂದು ಉದ್ಯೋಗಾಧಿಕಾರಿ ಮಹಾವೀರ ಉಪಾಧ್ಯೆ ತಿಳಿಸಿದ್ದಾರೆ.