ಹುಬ್ಬಳ್ಳಿ: ಬೆಂಗಳೂರಿನ ಪ್ರಿಸಂ ಜಾನ್ಸನ್ ಲಿಮಿಟೆಡ್ ಆರ್ ಎಂಸಿ ಡಿವಿಜನ್ ವತಿಯಿಂದ ಇಲ್ಲಿಯ ಕೆಎಲ್ಇ ಸಂಸ್ಥೆಯ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್ ನಲ್ಲಿ ಏ. 6ರಂದು ಬೆಳಗ್ಗೆ 9ಕ್ಕೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.
ಡಿಪ್ಲೋಮಾ ಇನ್ ಸಿವಿಲ್ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ 2022-2023 ನೇ ಸಾಲಿನಲ್ಲಿ ಉತ್ತೀರ್ಣರಾದವರು ಸಂದರ್ಶನಕ್ಕೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗೆ ಪ್ಲೇಸ್ ಮೆಂಟ್ ಆಫೀಸರ್ ಪ್ರೊ. ಸಂತೋಷ ಕಂಠಿ ಅವರನ್ನು ಸಂಪರ್ಕಿಸಲು ಪ್ರಾಚಾರ್ಯ ಪ್ರೊ. ವೀರೇಶ ಅಂಗಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.