ಜಿಲ್ಲೆ

ಅಡಕೆ ಕೃಷಿಕರ ಹಿತರಕ್ಷಣೆಗೆ ಬದ್ಧ - ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆಯಲ್ಲಿ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಭರವಸೆ

Mangaluru - Nishantha Narayana

ಪುತ್ತೂರು: ಗುಣಮಟ್ಟದ ಮೇಲೆ ಅಡಕೆ ಧಾರಣೆ ನಿಗದಿ ಪಡಿಸುವ ಕಾರಣ ದರದಲ್ಲಿ ವ್ಯತ್ಯಾಸವಾಗುತ್ತಿದೆ. ಮನೆಯಲ್ಲಿ ಪ್ರತಿಯೊಬ್ಬರೂ ಅಡಕೆ ತಿನ್ನುವ ಹವ್ಯಾಸ ಮಾಡಬೇಕು. ಜಿಲ್ಲೆಯ ಕೃಷಿಕರ ಹಿತಕಾಯುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ಮಹಮಾಯಾ ದೇವಸ್ಥಾನದ ಸಭಾಂಗಣದಲ್ಲಿ ಕೇಂದ್ರ ಅಡಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ(ಕ್ಯಾಂಪ್ಕೊ) ಪುತ್ತೂರು ನವಿಕೃತ ಕಚೇರಿ ಉದ್ಘಾಟನೆ ಮತ್ತು ಸದಸ್ಯ ಬೆಳೆಗಾರರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನುಷ್ಯ ಆಕ್ರಮಣದಿಂದ ಕಾಡು ಪ್ರಾಣಿಗಳು ನಾಡಿನತ್ತ ಬರುವುದು ಹೆಚ್ಚಾಗುತ್ತಿದೆ. ಮಂಗನಿಗೆ ಮಂಕಿ ಪಾರ್ಕ್, ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡುವ ಘೋಷಣೆ ಸರ್ಕಾರದಿಂದ ನಡೆದಿದ್ದು, ಕಾರ್ಯಗತವಾಗಿಲ್ಲ. ಮಂಗಗಳನ್ನು ಅಂಡಮಾನ್ ದ್ವೀಪಕ್ಕೆ ಬಿಟ್ಟು ಬರುವಂತೆ ಸರ್ಕಾರಕ್ಕೆ ಮನವಿ ನೀಡುವ ಕಾರ್ಯವಾಗಿದೆ. ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಿಪಿಸಿಆರ್‌ಐ ನಿರ್ದೇಶಕರಲ್ಲಿ ಈಗಾಗಲೇ ಮಾತುಕತೆ ಮಾಡಲಾಗಿದೆ. ಕೊಬ್ಬರಿಯ ಜತೆಗೆ ತೆಂಗಿನ ಕಾಯಿ ಖರೀದಿಸುವ ಚಿಂತನೆಯಿದೆ. ಮಾರ್ಚ್ ಅಂತ್ಯಕ್ಕೆ ೪೦ಕೋಟಿ ಲಾಭವನ್ನು ಅಡಕೆಯಿಂದಲೇ ಪಡೆಯುವುದು ನಿಶ್ಚಿತ ಎಂದು ತಿಳಿಸಿದರು.

ಶಾಖೆಯನ್ನು ಹಿರಿಯ ಸದಸ್ಯ ಬೆಳೆಗಾರರಾದ ಎನ್.ಎಸ್. ಹರಿಹರ್ ರಾವ್ ಕೊಡಿಪ್ಪಾಡಿ, ಸುರೇಶ್ ಬಲ್ನಾಡು, ಬಿ. ಟಿ. ನಾರಾಯಣ ಭಟ್, ಕೆ. ಟಿ. ಭಟ್ ಉದ್ಘಾಟಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ಎಸ್.ಆರ್. ಸತೀಶ್ಚಂದ್ರ, ಕೃಷ್ಣಪ್ರಸಾದ್ ಮಡ್ತಿಲ, ಕೆ. ಬಾಲಕೃಷ್ಣ ರೈ, ಜಯರಾಮ ಸರಳಾಯ, ಜಯಪ್ರಕಾಶ್ ನಾರಾಯಣ ಟಿ. ಕೆ., ರಾಧಾಕೃಷ್ಣನ್ ಕೆ., ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ., ಜನರಲ್ ಮ್ಯಾನೇಜರ್ ರೇಶ್ಮಾ ಮಲ್ಯಾ, ಡಿ.ಜಿ.ಎಂ. ಪರಮೇಶ್ವರ್, ಎಆರ್‌ಡಿಎಫ್ ವಿಜ್ಞಾನಿ ಕೇಶವ ಭಟ್ ಮತ್ತಿತರರು ಉಪಸ್ಥಿತರಿದ್ದರು.

ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಪ್ರಸ್ತಾವನೆಗೈದರು. ಕೃಷಿ ಅಽಕಾರಿ ಕೃಷ್ಣ ಕೃಷಿ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ಮಾರುಕಟ್ಟೆ ವಿಭಾಗ ಮುಖ್ಯಸ್ಥ ಗೋವಿಂದ ಭಟ್, ವಂದಿಸಿದರು. ನಿತಿನ್ ಕೊಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಚಿಂತನ - ಮಂಥನ

ಮಂಗಗಳ ಕಾಟಕ್ಕೆ ಅರಣ್ಯ ಇಲಾಖೆಜತೆಗೆ ಸೇರಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು. ಮಣ್ಣಿಗೆ ಯಾವ ಗೊಬ್ಬರ ನೀಡಬೇಕೆಂದು ತಿಳಿಯುವ ನಿಟ್ಟಿನಲ್ಲಿ ರಿಯಾಯಿತಿ ದರದ ಮಣ್ಣು ಪರೀಕ್ಷಾ ಕೇಂದ್ರವನ್ನು ತೆರೆಯುವ ಅಗತ್ಯವಿದೆ. ವಿಜ್ಞಾನಿಗಳು ಹಾಗೂ ಕೃಷಿಕರನ್ನು ಜೋಡಿಸುವ ಕೆಲಸ ಕ್ಯಾಂಪ್ಕೊದಿಂದ ನಡೆಯಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಕ್ಕೋ ಗೆ ಬೇಡಿಕೆಯಿದ್ದು, ೨೫೦ರೂ ಕನಿಷ್ಠ ದರವನ್ನು ನೀಡುವ ಕೆಲಸವಾಗಬೇಕು. ಅಡಕೆಗೆ ಪರ್ಯಾಯ ಬೆಳೆಯಾಗಿ ಕೊಕ್ಕೋವನ್ನು ಅಭಿವೃದ್ಧಿ ಪಡಿಸಬೇಕು. ಹುಲ್ಲು ಸಾಯುವ ಔಷಽ ಬಳಸುವುದರಿಂದ ಮಣ್ಣಿಗೆ ಹಾಗೂ ನೀರಿಗೆ ಸಮಸ್ಯೆಯಿದೆಯಾ ಎಂಬುದನ್ನು ವಿಜ್ಞಾನಿಗಳಿಂದ ಅಭಿಪ್ರಾಯ ಪಡೆದು ತಿಳಿಸುವ ಕಾರ್ಯವಾಗಬೇಕು. ಎಣ್ಣೆತಾಳೆಯ ಬಗ್ಗೆ ಹೆಚ್ಚಿನ ಗಮನ ನೀಡುವ ಕೆಲಸವಾಗಬೇಕು ಇವೇ ಮುಂತಾದ ಸಲಹೆಗಳು ಸಭೆಯಲ್ಲಿ ವ್ಯಕ್ತಗೊಂಡವು.

ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂಬ ನಿಟ್ಟಿನಲ್ಲಿ ೧೯೭೪ರಿಂದ ನಡೆದ ವಿವಿಧ ಸಂಶೋಧನೆಯನ್ನು ಸಂಗ್ರಹ ಮಾಡಿ ಸಂಬಂಧಪಟ್ಟವರಿಗೆ ನೀಡಲಾಗಿದೆ. ನಿಟ್ಟೆ ವಿಶ್ವ ವಿದ್ಯಾಲಯದ ಜತೆಗೆ ಸೇರಿಸಿಕೂಂಡು ಅಡಕೆ ಸಂಶೋಧನೆ ಮಾಡಲಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ವರದಿ ಸರಿಯಿಲ್ಲ ಎಂಬುದನ್ನು ತಿಳಿಸುವ ಕಾರ್ಯವಾಗಿದೆ. ಪ್ರಕರಣವನ್ನು ಜೀವಂತವಾಗಿಟ್ಟು, ಲೋಕ ಸಭೆಯಲ್ಲಿ ಚರ್ಚೆಗೆತ್ತಿಕೊಳ್ಳುವಂತೆ ಮಾಡಬೇಕಾಗಿದೆ.

| ಕಿಶೋರ್ ಕುಮಾರ್ ಕೊಡ್ಗಿ

ಅಧ್ಯಕ್ಷರು, ಕ್ಯಾಂಪ್ಕೊ

ಪರಸ್ಪರ ವಿಚಾರ ವಿನಿಮಯದಿಂದ ಸಂಸ್ಥೆಯ ಬೆಳವಣಿಗೆಗೆ ಸಹಾಕಾರಿಯಾಗಿದೆ. ಮೌಲ್ಯ ವಽತ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಕಾರ್ಯ ಕ್ಯಾಂಪ್ಕೊದಿಂದ ನಡೆಯುತ್ತಿದೆ.

| ಶಂಕರನಾರಾಯಣ ಭಟ್ ಖಂಡಿಗೆ

ಉಪಾಧ್ಯಕ್ಷರು, ಕ್ಯಾಂಪ್ಕೊ