ಜಿಲ್ಲೆ

ಭೂತಾನ್‌ನಿಂದ ಅಡಕೆ ಆಮದು ಆತಂಕ ಬೇಡ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಭರವಸೆ

Mangaluru - Hariprasad Rai



ಮಂಗಳೂರು : ಭೂತಾನ್‌ನಿಂದ ಹಸಿರು ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರವು ಸ್ಥಳೀಯ ಮಾರುಕಟ್ಟೆಯ ಬೆಲೆಗಳಲ್ಲಿ ಸಂಭಾವ್ಯ ಇಳಿಕೆಯ ಬಗ್ಗೆ ದೇಶೀಯ ರೈತರಲ್ಲಿ ಕಳವಳ ಹುಟ್ಟು ಹಾಕಿದೆ. ಆದರೆ ರೈತರು ಕಂಗಾಲಾಗುವ ಅಗತ್ಯವಿಲ್ಲವೆಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.
ಭೂತಾನ್‌ನಿಂದ ಹಸಿರು ಅಡಕೆ ಆಮದು ನಮ್ಮ ದೇಶದ ಒಟ್ಟು ಉತ್ಪಾದನೆಗೆ ಹೋಲಿಸಿದಾಗ ಅತೀ ಕಡಿಮೆ ಇದ್ದು ದೇಶೀಯ ಮಾರುಕಟ್ಟೆ ದರಗಳ ಮೇಲೆ ಪರಿಣಾಮ ಬೀರುವುದಿಲ್ಲ .ಇದು ಸ್ಥಳೀಯ ರೈತರು ಉತ್ಪಾದಿಸುವ ಬಿಳಿ ಅಡಕೆ ಬೆಲೆಯಲ್ಲಿ ಯಾವುದೇ ಪರಿಣಾಮ ಬೀರದು.
ಕ್ಯಾಂಪ್ಕೊ ಸಂಸ್ಥೆ 1.41ಲಕ್ಷಕ್ಕೂ ಹೆಚ್ಚು ಬೆಳೆಗಾರ ಸದಸ್ಯರನ್ನು ಪ್ರತಿನಿಧಿಸುವ ಸಂಸ್ಥೆಯಾಗಿದ್ದು, ಅಡಕೆ ಬೆಳೆಗಾರರ ಯಾವುದೇ ಅನಿಶ್ಚಿತತೆಯನ್ನು ನಿವಾರಿಸುವ ಗುರಿಹೊಂದಿದೆ ಎಂದು ಅವರು ತಿಳಿಸಿದ್ದಾರೆ.