ಜಿಲ್ಲೆ

ಮೈಸೂರಿನಲ್ಲಿ ಯುವ ನಾಯಕತ್ವ ತರಬೇತಿ ಶಿಬಿರ

ಮೈಸೂರು: ನಗರದ ಲಲಿತಾದ್ರಿಪುರದಲ್ಲಿರುವ ದಿ ಆರ್ಟ್ ಆಫ್ ಲಿವಿಂಗ್‌ನಿಂದ ಜ.6ರಿಂದ 13ರವರೆಗೆ ಯುವ ನಾಯಕತ್ವ ತರಬೇತಿ ಶಿಬಿರ ಆಯೋಜಿಸಿದ್ದು, 18ರಿಂದ 45 ವರ್ಷ ವಯಸ್ಸಿನೊಳಗಿನವರು ಭಾಗವಹಿಸಬಹುದು ಎಂದು ತರಬೇತಿ ಶಿಕ್ಷಕ ಜಿ.ಎ.ಸುಬ್ಬುಕೃಷ್ಣ ಮನವಿ ಮಾಡಿದರು.
ಶಿಬಿರದಲ್ಲಿ ನಾಯಕತ್ವ, ವ್ಯಕ್ತಿತ್ವ ವಿಕಾಸ ಸೇರಿದಂತೆ ಇನ್ನಿತರ ನಾಯಕತ್ವ ಗುಣಗಳನ್ನು ಹೇಳಿಕೊಡಲಾಗುವುದು. ಊಟ, ತಿಂಡಿ, ವಸತಿ ಸೇರಿದಂತೆ 2 ಸಾವಿರ ರೂ. ಶುಲ್ಕ ಇರಲಿದೆ. ಮಾಹಿತಿಗೆ ಮೊ: 91102 56623 ಸಂಪರ್ಕಿಸಬಹುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ದಿ ಆರ್ಟ್ ಆಫ್ ಲಿವಿಂಗ್‌ನ ಎಚ್.ಎಲ್.ವಿದ್ಯಾ, ಜಯರಾಮು, ಜೆ.ಮಹೇಶ್, ಪ್ರೀತಿ ಇದ್ದರು.