ಮಾನ್ವಿ ಕರಡಿಗುಡ್ಡ ರಸ್ತೆಯಲ್ಲಿ ತಾಯಿ ಹೆಸರಿನಲ್ಲಿ ಒಂದು ವೃಕ್ಷ ನೆಡೋಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅರಣ್ಯ ಅಧಿಕಾರಿ ರಮೇಶ ಬಡಿಗೇರ, ಅರಣ್ಯ ಪ್ರೇರಕ ಆದೇಪ್ಪ, ಕಾವಲುಗಾರ ಜಿ.ಸಿದ್ದಪ್ಪ, ಸರ್ವೋದಯ ಪ್ರಚಾರ್ಯೆ ರೇಣುಕಾ ವಿದ್ಯಾರ್ಥಿಗಳು ಇದ್ದರು. 
ಜಿಲ್ಲೆ

ಅಭಿಯಾನ ಯಶಸ್ವಿಗೆ ಕೈಜೋಡಿಸಿ

Kopala - Desk - Eraveni

ಮಾನ್ವಿ: ಪ್ರತಿಯೊಬ್ಬರು ಮನೆ ಆವರಣದಲ್ಲಿ ಒಂದು ಸಸಿಯನ್ನು ತಾಯಿ ಹೆಸರಿನಲ್ಲಿ ನೆಟ್ಟು ಪೋಷಣೆ ಮಾಡುವುದರಿಂದ ಸುತ್ತಮುತ್ತಲಿನ ಪರಿಸರ ಶುದ್ಧವಾಗಿರುತ್ತದೆ ಎಂದು ಪ್ರಭಾರಿ ವಲಯ ಅರಣ್ಯ ಅಧಿಕಾರಿ ರಮೇಶ ಬಡಿಗೇರ ಹೇಳಿದರು.

ಪಟ್ಟಣದ ಕರಡಿಗುಡ್ಡ ರಸ್ತೆಯಲ್ಲಿ ತಾಪಂ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ತಾಯಿ ಹೆಸರಿನಲ್ಲಿ ಒಂದು ವೃಕ್ಷ ನೆಡೋಣ ಅಭಿಯಾನದಲ್ಲಿ ಶುಕ್ರವಾರ ಮಾತನಾಡಿದರು. ವಿಶ್ವ ಪರಿಸರ ದಿನಚಾರಣೆ ಅಂಗವಾಗಿ ದೇಶದ ಪ್ರಧಾನಿಯಿಂದ ಆರಂಭಗೊಂಡ ಅಭಿಯಾನ ಯಶಸ್ವಿ ಮಾಡಬೇಕಿದೆ ಎಂದರು. ನೇತಾಜಿ ಶಾಲೆ ಮಕ್ಕಳು ಅವರ ತಾಯಿ ಹೆಸರಿನಲ್ಲಿ ಸಸಿಗಳನ್ನು ನೆಟ್ಟರು.

ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಇ.ನರಸಿಂಹ, ಕಾರ್ಯದರ್ಶಿ ವಿಜಯಲಕ್ಷ್ಮೀ, ತಾಲೂಕ ಐಇಸಿ ಸಂಯೋಜಕ ಈರೇಶ, ಅರಣ್ಯ ಪ್ರೇರಕ ಆದೇಪ್ಪ, ಕಾವಲುಗಾರ ಜಿ.ಸಿದ್ದಪ್ಪ, ಬಸನಗೌಡ, ಅಮರೇಶ ಇತರರಿದ್ದರು.