ಜಿಲ್ಲೆ

ದಕ್ಷಿಣ ಕಾಶಿಯಲ್ಲಿ ಅಭಿಯಾನ

Davangere - Desk - Mahesh Babu E

ಹಿರಿಯೂರು: ನಗರಸಭೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ನನ್ನ ಮಣ್ಣು-ನನ್ನ ದೇಶ ಅಭಿಯಾನದಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು ಪಂಚ ಪ್ರಾಣ್ ಶಪಥ ತೆಗೆದುಕೊಂಡರು. ನಗರದ ವಿವಿಧೆಡೆ ಅಭಿಯಾನ ನಡೆಸಲಾಯಿತು.

ನಗರಸಭೆ ಪೌರಾಯುಕ್ತ ಎಚ್.ಮಹಂತೇಶ್ ಮಾತನಾಡಿ, ಇಂದಿನ ಯುವಕರು ದೇಶದ ಸಂವಿಧಾನ, ಸಾರ್ವಭೌಮತೆ, ಏಕತೆ, ದೇಶ ರಕ್ಷಣೆ ಮಾಡುವ ಸೈನಿಕರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ದೇಶ ಮೊದಲು ಎನ್ನುವ ಮನೋಭಾವ ಎಲ್ಲರಲ್ಲೂ ಮೂಡಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಅಧಿಕಾರಿ ವಿನಯ್, ನಗರಸಭೆ ಸಿಬ್ಬಂದಿ ಮೀನಾಕ್ಷಿ, ಅಶೋಕ್, ಜನಾರ್ಧನ್ ಇತರರಿದ್ದರು.