ಕೋಲಾರ: ರಾಜ್ಯದಲ್ಲಿ ದಲಿತ ನಾಯಕರನ್ನು ಒಳಸಂಚು ವಾಡಿ ಸೋಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿ ಹೀನಾಯವಾಗಿ ಸೋಲಿಸಲು ದಲಿತ ಮತದಾರರನ್ನು ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಲಾಗಿದೆ ಎಂದು ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ ಹೇಳಿದರು.
ನಗರದಲ್ಲಿ ಶನಿವಾರ ದಲಿತ ಮತದಾರರ ಜಾಗತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಅಧಿಕಾರಕ್ಕಾಗಿ ಹಂತ ಹಂತವಾಗಿ ದಲಿತ ನಾಯಕರನ್ನು ಸೋಲಿಸಿದ ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅವರನ್ನು ಸೋಲಿಸಲು ದಲಿತ ಸಮುದಾಯ ನಿರ್ಣಯ ತೆಗೆದುಕೊಂಡಿದೆ. ಅದರಂತೆ ಕೋಲಾರದ ಮತದಾರರನ್ನು ಜಾಗೃತಿಗೊಳಿಸುವ ಕೆಲಸವನ್ನು ದಲಿತ ನಾಯಕರು ವಾಡಲಿದ್ದಾರೆ ಎಂದರು.
ರಾಷ್ಟ್ರದಲ್ಲಿ 75 ವರ್ಷದಿಂದ ದಲಿತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಮುಖ್ಯಮಂತ್ರಿಯಾಗುವ ಸಮರ್ಥ, ಅರ್ಹತೆ, ಅನುಭವ, ಪಕ್ಷನಿಷ್ಠೆ ಹೊಂದಿರುವ ದಲಿತ ಚುನಾಯಿತ ಜನಪ್ರತಿನಿಧಿಗಳು ಇದ್ದರೂ ಕಾಂಗ್ರೆಸ್ ದಲಿತರಿಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿಲ್ಲ ಎಂದರು.
ದಲಿತ ಮುಖಂಡ ದಲಿತ್ ನಾರಾಯಣಸ್ವಾಮಿ ವಾತನಾಡಿ, ತಾನು ಮುಖ್ಯಮಂತ್ರಿಯಾಗಲು ಅಡ್ಡಿಯಾಗುತ್ತಾರೆಂಬ ಕಾರಣಕ್ಕೆ 2013ರಲ್ಲಿ ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್‌ರನ್ನು ಸೋಲಿಸಿ ದಲಿತ ಮುಖ್ಯಮಂತ್ರಿ ಅವಕಾಶ ತಪ್ಪಿಸಿದ್ದಾರೆ. ಕಾಂಗ್ರೆಸ್ ಪರ ಸದಾಕಾಲ ದಲಿತರು ಒಲವು ತೋರುತ್ತಿದ್ದರೂ, ಪಕ್ಷಕ್ಕೆ ವಲಸೆ ಬಂದು ದಲಿತರನ್ನು ದಮನ ವಾಡಿ ತಾನು ಅಧಿಕಾರದ ಸವಿ ಉಂಡಿರುವ ಸಿದ್ದರಾಮಯ್ಯ ರಾಜ್ಯದ ಎಲ್ಲೇ ಸ್ಪರ್ಧಿಸಿದರೂ ದಲಿತರ ವಿರೋಧವಿದೆ ಎಂದರು.
ದಲಿತ ಮುಖಂಡ ರಾಮಸಂದ್ರ ತಿರುಮಲೇಶ್, ಹಲವು ದಲಿತ ಸಂಟನೆಗಳ ಮುಖಂಡರು ಸಿದ್ದರಾಮಯ್ಯ ಸೋಲಿಸಲು ಪಣತೊಟ್ಟು ಹೋರಾಡುತ್ತಿದ್ದೇವೆ ಎಂದರು. ಮುಖಂಡರಾದ ಸಾಹುಕಾರ್ ಶಂಕರಪ್ಪ, ಮಂಜುನಾಥ್, ಅಶೋಕ್, ಅನಿಲ್ ಕುವಾರ್, ಸುದರ್ಶನ್ ಇದ್ದರು.
ದಲಿತ ಶಕ್ತಿ ತೋರಿಸಿ…ಕರಪತ್ರ ವಿತರಣೆ
ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ದಲಿತ ವಿರೋಧಿ ಅಸ್ತ್ರ ಪ್ರಯೋಗಿಸಲಾಗುತ್ತಿದ್ದು, ಕ್ಷೇತ್ರದಾದ್ಯಂತ ಶನಿವಾರ ಕೆಲವು ದಲಿತ ಮುಖಂಡರಿಂದ ಕರಪತ್ರ ಅಭಿಯಾನ ಆರಂಭವಾಯಿತು. ‘ಸಿದ್ದರಾಮಯ್ಯರನ್ನು ಸೋಲಿಸಿ, ದಲಿತ ಶಕ್ತಿ ತೋರಿಸಿ’ ಎಂಬ ಕರಪತ್ರಗಳನ್ನು ಹಂಚಲಾಗುತ್ತಿದೆ. ದಲಿತ ಸ್ವಾಭಿವಾನಿಗಳು ನಗರದ ಪ್ರಮುಖ ವೃತ್ತ, ಅಂಗಡಿ, ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕರಪತ್ರ ನೀಡಿ ದಲಿತ ವಿರೋಧಿ ಸಿದ್ದರಾಮಯ್ಯಗೆ ಮತ ಹಾಕಬೇಡಿ ಎಂದು ಮನವಿ ವಾಡಿಕೊಂಡರು. ಕರಪತ್ರಗಳು ಆಕರ್ಷಕವಾಗಿದ್ದು, ಯಾವುದೇ ವ್ಯಕ್ತಿ, ಸಂ ಸಂಸ್ಥೆ ಹೆಸರಲ್ಲಿ ನಮೂದಿಸಿಲ್ಲ. ಕೆಲವು ಕಡೆ ಹಂಚಿರುವ ಕರಪತ್ರಗಳಲ್ಲಿ ವಾತ್ರ ಬಿಡಿಎಸ್ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಹೆಸರಿದೆ. ಕರಪತ್ರ ವಿತರಣೆಯಲ್ಲೂ ಅವರೇ ಮಂಚೂಣಿಯಲ್ಲಿದ್ದರು.
ಕರಪತ್ರ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದ ರಾಮಸಂದ್ರ ತಿರುಮಲೇಶ್ ವಾತನಾಡಿ, ದಲಿತ ನಾಯಕರ ವಿರುದ್ಧ ಒಳಸಂಚು ವಾಡಿದ್ದ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಕರೆ ಕ್ಷೇತ್ರಾದ್ಯಂತ ಕೇಳಿಬರುತ್ತಿದೆ. ಹಲವು ದಲಿತ ಸಂಟನೆಗಳ ಮುಖಂಡರು ಸಿದ್ದರಾಮಯ್ಯ ಸೋಲಿಸಲು ಪಣತೊಟ್ಟು ಹೋರಾಡುತ್ತಿದ್ದೇವೆ ಎಂದರು. ಇನ್ನು 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಅಲ್ಲಿನ ದಲಿತ ಮತದಾರರು ಒಗ್ಗಟ್ಟಾಗಿ ಸಿದ್ದರಾಮಯ್ಯ ವಿರುದ್ಧ ಮತ ಚಲಾಯಿಸಿ 36 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಅದೇ ರೀತಿ ಕೋಲಾರ ಕ್ಷೇತ್ರದ ದಲಿತ ಮತದಾರರು ಸಾಬೀತುಪಡಿಸಬೇಕು ಎಂದು ಮನವಿ ವಾಡಿದರು.