ಜಿಲ್ಲೆ

ಸಿಎಸ್‌ಐ ಕೃಪಾ ವಿದ್ಯಾಲಯದಲ್ಲಿ ಶಿಬಿರಕ್ಕೆ ಚಾಲನೆ

ಇಂದಿರಾ ಎನ್ ಕೆ

ಕುಂದಾಪುರ: ಯುಬಿಯಂಸಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಿಎಸ್‌ಐ ಕೃಪಾ ವಿದ್ಯಾಲಯದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಚಟುವಟಿಕೆ ಒಳಗೊಂಡ ಐದು ದಿನಗಳ ಶಿಬಿರ ಮಂಗಳವಾರ ಪ್ರಾರಂಭವಾಯಿತು.

ಸಿಎಸ್‌ಐ ಕೃಪಾ ವಿದ್ಯಾಲಯ ಸಂಚಾಲಕಿ ಐರಿನ್ ಸಾಲಿನ್ಸ್, ಸಿಎಸ್‌ಐ ಕೃಪಾ ದೇವಾಲಯದ ಧರ್ಮಗುರು ಇಮ್ಯಾನ್ಯುಯಲ್ ಜೈಕರ್, ಮುಖ್ಯ ಶಿಕ್ಷಕಿ ಅನಿತಾ ಆಲಿಸ್ ಡಿಸೋಜ ಶುಭಹಾರೈಸಿದರು. ಸವಿತಾ ಮತ್ತು ತಂಡದಿಂದ ಶಿಬಿರ ಸಂಯೋಜನೆಗೊಂಡಿತು. ದೀಪಕ್ ತಾಂಡವ ನೃತ್ಯ ಶಾಲೆಯ ಸದಸ್ಯರು ಇದ್ದರು. ವಿಲ್ಮಾ ವಂದಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು.