ಮಸ್ಕಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸದ್ದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಲಾಯಿತು. ತಾಲೂಕು ಯೋಜನಾಧಿಕಾರಿ ಶಾಲಿನಿ, ಡಾ.ಬಿ.ಎಚ್.ದಿವಟರ್, ಜಿ.ಪಂ.ಮಾಜಿ ಸದಸ್ಯ ಎಚ್.ಬಿ.ಮುರಾರಿ, ಜನ ಜಾಗೃತಿ ಸಮಿತಿ ಜಿಲ್ಲಾ ಸದಸ್ಯ ಎಂ.ಅಮರೇಶ, ಶಿವಕುಮಾರ.ಎನ್, ಕಸಾಪ ಅಧ್ಯಕ್ಷ ಮಹಾಂತೇಶ ಬ್ಯಾಳಿ, ಬಸಪ್ಪ ಬ್ಯಾಳಿ, ಮಸೂದಪಾಷಾ ಇತರರಿದ್ದರು. 
ಜಿಲ್ಲೆ

ಶಿಬಿರದಿಂದ ಮದ್ಯ ವ್ಯಸನಿಗಳ ಮನ ಪರಿವರ್ತನೆ

Kopala - Desk - Eraveni

ಮಸ್ಕಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನ ಜಾಗೃತಿ ಸಮಿತಿಯಿಂದ ಸೆಪ್ಟಂಬರ್‌ನಲ್ಲಿ ಮದ್ಯವರ್ಜನ ಶಿಬಿರ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಯೋಜನೆ ನಿರ್ದೇಶಕ ಮೋಹನ ನಾಯ್ಕ ಹೇಳಿದರು.

ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜನಜಾಗೃತಿ ಸಮಿತಿ ಯೋಜನಾಧಿಕಾರಿ ನಾಗೇಶ ಮಾತನಾಡಿ, ಎಂಟು ವರ್ಷಗಳ ಹಿಂದೆ ಮದ್ಯವರ್ಜನ ಶಿಬಿರ ನಡೆಸಲಾಗಿತ್ತು. ಈಗ ಮತ್ತೊಮ್ಮೆ ಏರ್ಪಡಿಸಲಾಗಿದೆ.

ಮದ್ಯ ವೇಸನಿಗಳ ಮನ ಪರಿವರ್ತನೆ ಮಾಡುವ ಪ್ರಮುಖ ಕಾರ್ಯಕ್ರಮ ಇದಾಗಿದ್ದು ಕನಿಷ್ಠ 80-100 ಜನರನ್ನು ಶಿಬಿರಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದರು. ಪ್ರಮುಖರಾದ ಡಾ.ಸಂತೋಷ, ಶಿವಪುತ್ರಯ್ಯಸ್ವಾಮಿ ಮೆದಕಿನಾಳ, ರಾಜಣ್ಣ ಪರಡ್ಡಿ, ಮಲ್ಲಿಕಾರ್ಜುನ ಪರಡ್ಡಿ, ಬಸವರಾಜ ಗುಂಡಳ್ಳಿ, ಮರಿಯಪ್ಪ ಅಂಬ್ಲಿ, ಸುಕಮುನಿಯಪ್ಪ ನಾಯಕ, ಶಿವು, ಮಲ್ಲಿಕಾರ್ಜುನ ಕಂದಗಲ್ ಇದ್ದರು.