ಜಿಲ್ಲೆ

ರಸ್ತೆಬದಿ ಕಸ ಹಾಕುವವರ ಪತ್ತೆಗೆ ಕ್ಯಾಮರಾ ಕಣ್ಗಾವಲು

ಚನ್ನಪಟ್ಟಣ

ನಗರದ ಕುಡಿನೀರು ಕಟ್ಟೆಯ ಬಳಿ ರಸ್ತೆ ಬದಿಯಲ್ಲಿ ಕಸ ಹಾಕಿ ಅದಕ್ಕೆ ಬೆಂಕಿ ಹಾಕುತ್ತಿದ್ದವರ ಪತ್ತೆಗಾಗಿ ನಗರಸಭೆ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ನಗರದ ಕುಡಿನೀರುಕಟ್ಟೆ ಬಳಿ ಬೆಂಗಳೂರು& ಮೈಸೂರು ಹೆದ್ದಾರಿ ಬದಿಯಲ್ಲೆ ಹಲವು ದಿನಗಳಿಂದ ತ್ಯಾಜ್ಯ ತಂದು ಹಾಕಲಾಗುತಿತ್ತು. ಇದರೊಂದಿಗೆ, ಕಸಕ್ಕೆ ಬೆಂಕಿ ಹಾಕುವ ಕೆಲಸಗಳು ನಡೆಯುತ್ತಿದ್ದವು. ಈ ಜಾಗದಲ್ಲಿ ಕಸ ಹಾಕುವುದನ್ನು ತಡೆಗಟ್ಟುವುದು ಸಾಧ್ಯವಾಗಿರಲಿಲ್ಲ. ಕಸಕ್ಕೆ ಬೆಂಕಿ ಹಚ್ಚುವ ಹಿನ್ನೆಲೆಯಲ್ಲಿ ಉತ್ಪತ್ತಿಯಾಗುವ ಹೊಗೆಯಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯೂ ಆಗುತಿತ್ತು. ಎಷ್ಟೇ ಪ್ರಯತ್ನಪಟ್ಟರೂ ಈ ಜಾಗದಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ಈ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಪ್ರಾಯೋಗಿಕ! :

ಕುಡಿನೀರುಕಟ್ಟೆ ಬಳಿ ಪ್ರಾಯೋಗಿಕವಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಕೆಲವೆಡೆ ಅಳವಡಿಸುವ ಯೋಜನೆ ನಗರಸಭೆಯದ್ದಾಗಿದೆ. ಈ ಮೂಲಕ ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದು ನಗರಸಭೆಯ ಉದ್ದೇಶವಾಗಿದೆ.

ವಾಸಿಲ್​ ಆಲಿಖಾನ್​, ನಗರಸಭೆ ಅಧ್ಯಕ್ಷ

ಕಸ ಹಾಕಲು ಜಾಗದ ಸಮಸ್ಯೆ ಇತ್ತು. ಡಿಸಿಎಂ ಡಿ.ಕೆ.ಶಿವಕುಮಾರ್​ ಮತ್ತು ಶಾಸಕ ಸಿ.ಪಿ ಯೋಗೇಶ್ವರ್​ ಅವರೊಂದಿಗೆ ಚರ್ಚಿಸಿ ಸದ್ಯಕ್ಕೆ ಕಸ ಹಾಕುವ ಜಾಗ ಪತ್ತೆ ಮಾಡಲಾಗಿದೆ. ಸದ್ಯಕ್ಕೆ ಕಸ ವಿಲೇವಾರಿ ಮಾಡಲು ಸ್ಥಳದ ಸಮಸ್ಯೆ ಇಲ್ಲ. ಸಾರ್ವಜನಿಕರು ನಿಮ್ಮ&ನಿಮ್ಮ ಮನೆಗಳಲ್ಲಿ ಹಸಿ ಕಸ ಮತ್ತು ಒಣಗಿದ ಕಸವನ್ನು ಬೇರ್ಪಡಿಸಿ ನಗರಸಭೆ ವಾಹನ ಮನೆಯ ಮುಂದೆ ಬಂದಾಗ ಹಾಕಬೇಕು.