ಜಿಲ್ಲೆ

ಶಿವಳ್ಳಿ ಬ್ರಾಹ್ಮಣ ಸಭಾ ಸಾಂಸ್ಕೃತಿಕ ಉತ್ಸವ

ಸೌಮ್ಯ ಆರ್

ಬದಿಯಡ್ಕ: ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವತಿಯಿಂದ ವಾರ್ಷಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವದ ಸಮಾರೋಪ ಸಮಾರಂಭ ಮತ್ತು ಕೇಂದ್ರದ ಮಹಾಸಭೆ ಇತ್ತೀಚೆಗೆ ಎಡನೀರು ಮಠದಲ್ಲಿ ಸಂಪನ್ನಗೊಂಡಿತು.

ವೈದ್ಯಕೀಯ ಶಿಬಿರ ಮತ್ತು ವಧು-ವರರ ಅನ್ವೇಷಣೆ, ಜಾತಕ ವಿಮರ್ಶೆ ಹಮ್ಮಿಕೊಳ್ಳಲಾಗಿತ್ತು. ವೈದ್ಯಕೀಯ ಶಿಬಿರದಲ್ಲಿ 170 ಮಂದಿ ಆರೋಗ್ಯ ತಪಾಸಣೆ ಮತ್ತು ವಧುವರರ ಅನ್ವೇಷಣೆಯಲ್ಲಿ 90 ಮಂದಿ ಭಾಗವಹಿಸಿದ್ದರು. ಕಾಸರಗೋಡು ವಲಯ ಪ್ರಥಮ ಸ್ಥಾನ, ಏತಡ್ಕ ವಲಯ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಸಂಘಟನೆಯ ಅಧ್ಯಕ್ಷ ಮಂಜುನಾಥ ತೇರಕುಂಜತ್ತಾಯ, ಕಾರ್ಯದರ್ಶಿ ಚೇತನ ರಾಮ ನೂರಿತ್ತಾಯ, ಖಜಾಂಚಿ ಸೀಮಾ ಬಳ್ಳುಳ್ಳಾಯ, ಶ್ರೀನಿವಾಸ ಅಮ್ಮಣ್ಣಾಯ ಮೊದಲಾದವರಿದ್ದರು.