ಹಿರೇಕೆರೂರ: ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರು ಸೇರಿ ಎರಡು ಆಕಳುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಕಚವಿ ಗ್ರಾಮದಲ್ಲಿ ನಡೆದಿದೆ.
ಸಿದ್ದರಾಮೇಶ ಶಿವಬಸಪ್ಪ ಕೂಗೂರ (39) ಎಂಬುವರ ಆಕಳು ಕಳ್ಳತನ ಮಾಡಿರುವುದು.
ಇವರು ದನದ ಕೊಟ್ಟಿಗೆಯಲ್ಲಿ ಆಕಳುಗಳನ್ನು ಕಟ್ಟಿದ್ದರು. ಯಾರೂ ಇಲ್ಲದ ಸಮಯದಲ್ಲಿ ಯಾರೋ ದುಷ್ಕಮಿರ್ಗಳು ಬಂದು ಆಕಳುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.