ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಕಾಣಿಗೆರೆ ಗ್ರಾಮದಲ್ಲಿ ಚಿರತೆ ದಾಳಿಗೆ ಕರು ಬಲಿಯಾಗಿದೆ.
ಕಾಣಿಗೆರೆ ನಿವಾಸಿ ಸಂತೋಷ್ ಅವರು ಮನೆಯ ಸಮೀಪದಲ್ಲಿರುವ ಕೊಟ್ಟಿಗೆಯಲ್ಲಿ ಕರುವನ್ನು ಕಟ್ಟಿಹಾಕಿದ್ದರು. ಮಂಗಳವಾರ ಮುಂಜಾನೆ ಚಿರತೆ ದಾಳಿ ಮಾಡಿ ಕರುವನ್ನು ಕೊಟ್ಟಿಗೆಯಿಂದ ಸುಮಾರು 50 ಮೀ.ದೂರದ ಕಾಫಿ ತೋಟಕ್ಕೆ ಎಳೆದೊಯ್ದು ಕೊಂದು ಹಾಕಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.