ಕೆ.ಆರ್.ನಗರ : ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಲಾಭದ ಆಸೆ ಬಿಟ್ಟು ಸಮಾಜಮುಖಿ ಆರೋಗ್ಯ ಸೇವೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಎಂದು ನವನಗರ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು. ಪಟ್ಟಣದ ಅರ್ಕನಾಥ ರಸ್ತೆಯಲ್ಲಿರುವ ಶರತ್ ಕಣ್ಣಿನ ಆಸ್ಪತ್ರೆ ಹೊರತಂದಿರುವ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಳೆದ 3 ವರ್ಷದ ಅವಧಿಯಲ್ಲಿ 3 ಸಾವಿರ ಜನರಿಗೆ ಕಣ್ಣಿನ ಚಿಕಿತ್ಸೆ ಮಾಡುವ ಮೂಲಕ ಶರತ್ ಆಸ್ಪತ್ರೆ ಮಾದರಿ ಚಟುವಟಿಕೆ ನಡೆಸಿರುವುದು ಶ್ಲಾಘನೀಯ ಎಂದರು. ನೇತ್ರ ತಜ್ಞ ಡಾ.ಶರತ್ ಮಾತನಾಡಿ, ಯಶಸ್ವಿನಿ ಕಾರ್ಡ್ ಹೊಂದಿರುವವರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ನೇತ್ರ ಚಿಕಿತ್ಸೆ ನಡೆಸಿ ಲೆನ್ಸ್ ಅಳವಡಿಸಲಾಗುವುದು. ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಂಬಾಕು ಮಾರುಕಟ್ಟೆ ನಿವೃತ್ತ ಅಧೀಕ್ಷಕ ಕೆ.ಎನ್.ದಿನೇಶ್ ನಂಜಪ್ಪ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ರಮೇಶ್, ನವ ನಗರ ಅರ್ಬನ್ ಬ್ಯಾಂಕ್ ನಿರ್ದೇಶಕ ಕೇಶವ್ ಮತ್ತಿತರರು ಹಾಜರಿದ್ದರು.