ಜಿಲ್ಲೆ

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 10 ಮಂದಿ ಶಾಸಕರ ಕಿರು ಪರಿಚಯ

ಬೆಂಗಳೂರು: ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶಾಸಕರಾದ ರಮೇಶ ಜಾರಕಿಹೊಳಿ, ಎಸ್​.ಟಿ. ಸೋಮಶೇಖರ್​, ಸುಧಾಕರ್​, ಬೈರತಿ ಬಸವರಾಜ್​, ಶಿವರಾಂ ಹೆಬ್ಬಾರ್​, ಬಿ.ಸಿ.ಪಾಟೀಲ್​, ಕೆ.ಗೋಪಾಲಯ್ಯ, ಕೆ.ನಾರಾಯಣಗೌಡ, ಶ್ರೀಮಂತಪಾಟೀಲ್​ ಹಾಗೂ ಆನಂದ್​ಸಿಂಗ್​ ಅವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.

1)ರಮೇಶ ಜಾರಕಿ ಹೊಳಿ: ಗೋಕಾಕ್​ ವಿಧಾನಸಭಾ ಕ್ಷೇತ್ರದಲ್ಲಿ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 3ನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜಾತಿ: ವಾಲ್ಮೀಕಿ.
2)ಎಸ್​.ಟಿ.ಸೋಮಶೇಖರ್​: ಯಶವಂತಪುರ ವಿಧಾನಸಭಾ ಕ್ಷೇತ್ರ. 2ನೇ ಬಾರಿ ಶಾಸಕರು. ಬಿಡಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ. ಜಾತಿ:ಒಕ್ಕಲಿಗ
3)ಡಾ. ಸುಧಾಕರ್​: ಚಿಕ್ಕಬಳ್ಳಾಪುರ ಕ್ಷೇತ್ರ. 3ನೆ ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿಗೆ ಸಚಿವರು. ಜಾತಿ: ಒಕ್ಕಲಿಗ.
4)ಬೈರತಿ ಬಸವರಾಜು: ಕೆಆರ್​ಪುರ ಕ್ಷೇತ್ರ, 3ನೇ ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿಗೆ ಸಚಿವರು. ಜಾತಿ ಕುರುಬ.
5) ಶಿವರಾಂ ಹೆಬ್ಬಾರ್​: ಯಲ್ಲಾಪುರ ಕ್ಷೇತ್ರ, 3 ಬಾರಿ ಶಾಸಕರು, ಮೊದಲ ಬಾರಿಗೆ ಸಚಿವರು. ಜಾತಿ: ಬ್ರಾಹ್ಮಣ
6)ಬಿ.ಸಿ.ಪಾಟೀಲ್​: ಹಿರೇಕೆರೂರು ಕ್ಷೇತ್ರ. 4ನೇ ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿ ಸಚಿವರು. ಜಾತಿ: ಲಿಂಗಾಯತ
7)ಕೆ.ಗೋಪಾಲಯ್ಯ: ಮಹಾಲಕ್ಷ್ಮೀಲೇಔಟ್​ ಕ್ಷೇತ್ರ, 2ನೇ ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿಗೆ ಸಚಿವರು. ಜಾತಿ: ಒಕ್ಕಲಿಗ
8) ಕೆ.ನಾರಾಯಣಗೌಡ: ಕೆಆರ್​ಪೇಟೆ ಕ್ಷೇತ್ರ. 3ನೇ ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿಗೆ ಸಚಿವರು. ಜಾತಿ: ಒಕ್ಕಲಿಗರು.
9)ಶ್ರೀಮಂತ ಪಾಟೀಲ್​: ಕಾಗವಾಡ ಕ್ಷೇತ್ರ. 2 ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿ ಸಚಿವರು. ಜಾತಿ: ಮರಾಠ
10)ಆನಂದ್​ಸಿಂಗ್​: ವಿಜಯನಗರ ಕ್ಷೇತ್ರ, 3 ಬಾರಿ ಶಾಸಕರು. 2ನೇ ಬಾರಿಗೆ ಸಚಿವರು. ಜಾತಿ: ರಜಪೂತ್​.

(ದಿಗ್ವಿಜಯ ನ್ಯೂಸ್​)